ರಾಜ್ಯಾದ್ಯಂತ ತೆರೆಕಂಡು ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ದುನಿಯಾ ವಿಜಯ್ ಅಭಿನಯದ ,ಆರ್ ಚಂದ್ರು ನಿರ್ದೇಶನದ ಕನಕ ಚಿತ್ರವನ್ನು ನಾಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ವೀಕ್ಷಣೆ ಮಾಡಲಿದ್ದಾರೆ.ಅಣ್ಣಾವ್ರ ಅಭಿಮಾನಿಗಳ ಮನಗೆದ್ದಿರುವ ಕನಕ ಚಿತ್ರಕ್ಕೆ ಈಗ ಪವರ್ ಸಿಕ್ಕ ಸಂಭ್ರಮ.

ಕನಕ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಅಣ್ಣಾವ್ರ ಅಭಿಮಾನಿಯ ಪಾತ್ರದಲ್ಲಿ ಎಲ್ಲರ ಮನಮುಟ್ಟುವಂತೆ ಅಭಿನಯಿಸಿದ್ದಾರೆ.ಆಟೋ ಡ್ರೈವರ್ ಮತ್ತು ತಂದೆ – ಮಧುರ ಭಾಂದವ್ಯವನ್ನು ಮನಮುಟ್ಟುವಂತೆ ಚಿತ್ರಿಸಿರುವ ಆರ್.ಚಂದ್ರು ಉತ್ತಮ ಸಂದೇಶದ ಜೊತೆ ಮನರಂಜನೆ ನೀಡುವ ಅಂಶಗಳನ್ನು ಚಿತ್ರದಲ್ಲಿ ಸೇರಿಸಿರುವುದು ಕನಕ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.ಚಿತ್ರದ ಹಾಡುಗಳು ಮತ್ತು ಕಾಮಿಡಿ ದೃಶ್ಯಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗಿರುವುದು ಕನಕ ಎಲ್ಲೆಡೆ ಹೌಸ್ ಫುಲ್ ಕಾಣುವಂತೆ ಮಾಡಿದೆ.ಈಗ ಕನಕ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಾಳೆ ನೋಡುತ್ತಿರುವುದು ಕನಕ ಚಿತ್ರತಂಡಕ್ಕೆ ಸಂತಸ ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here