ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.ಆರಂಭಿಕ ಹಂತದ ಕಲೆಕ್ಷನ್ ನಲ್ಲಿ ಅಂಜನಿಪುತ್ರ ಮುಂದುವರಿದಿದ್ದರೆ ಬಹುಶಃ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಅಂಜನಿಪುತ್ರ ಚಿತ್ರ ಮುರಿಯುತ್ತಿತ್ತು.ಆದರೆ ಸಂಭಾಷಣೆ ವಿರುದ್ದ ಕೇಸ್ ಹಾಕಿದ್ದ ವಕೀಲರು ಒಂದು ದಿನದ ಕಲೆಕ್ಷನ್ ಅಂಜನಿಪುತ್ರ ಚಿತ್ರಕ್ಕೆ ಬ್ರೇಕ್ ಹಾಕಿದ್ದರು.ಆದರೆ ಅಂಜನಿಪುತ್ರ ಚಿತ್ರ ಚಿತ್ರಮಂದಿರಗಳಲ್ಲಿ ಮತ್ತೆ ಫೀನಿಕ್ಸ್ ನಂತೆ ತನ್ನ ಕಲೆಕ್ಷನ್ ವಿಚಾರದಲ್ಲಿ ಎದ್ದು ನಿಂತಿದೆ.ರಾಜ್ಯಾದ್ಯಂತ ಭರ್ಜರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಅಂಜನಿಪುತ್ರ ಕಳೆದ ನಾಲ್ಕುದಿನಗಳಿಂದ ಸತತವಾಗಿ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.

ಇದರಿಂದ ಅಂಜನಿಪುತ್ರ ಚಿತ್ರತಂಡ ಸಖತ್ ಖುಷಿಯಾಗಿದೆ.ಗಾಂಧೀನಗರದ ಪಂಡಿತರ ಲೆಕ್ಕಾಚಾರದಂತೆ ಅಂಜನಿಪುತ್ರ ಚಿತ್ರ ತೆರೆಗೆ ಬಂದ 14 ದಿನಗಳಿಂದ ಗಳಿಸಿದ ಒಟ್ಟು ಗಳಿಕೆ 28 ಕೋಟಿ‌ ಚಿಲ್ಲರೆ.ಒಂದೆರಡು ದಿನ ಕಲೆಕ್ಷನ್ ಗೆ ಹೊಡೆತ ಬಿದ್ದ ಪರಿಣಾಮ ಚಿತ್ರದ ದಾಖಲೆಗಳಿಕೆ ಸ್ವಲ್ಪದರಲ್ಲಿ ಮಿಸ್ ಆದರೂ ಚಿತ್ರದ ಈಗಿನ ಓಟ ಭರ್ಜರಿಯಾಗಿ ಇದೆ.ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಅಭಿಮಾನಿಗಳು ಪವರ್ ತೋರಿಸುವ ಮೂಲಕ ಅಂಜನಿಪುತ್ರ ಸೂಪರ್ ಹಿಟ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here