ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರೈ ಪತ್ನಿ ಹಾಗೂ ಕೊರಿಯೋಗ್ರಾಫರ್ ಪೋನಿ ವರ್ಮಾ ಟ್ವೀಟ್ ಮಾಡಿದ್ದು ನಮ್ಮ ಸಿನಿಮಾದವರನ್ನು ನಿಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಮೋದಿಯನ್ನು ಸಂದರ್ಶಿಸಿದ್ದು ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಚಿತ್ರದೋತ್ಯವನ್ನು ಬಿಟ್ಟುಬಿಡಿ ಎಂದು ಪೋನಿ ವರ್ಮಾ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ. ನಟ ನಟಿಯರು ಮೋದಿಗೆ ‘ನೋ’ ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ನನಗೆ ಅರ್ಥವಾಗಿದೆ ಎಂದಿದ್ದಾರೆ. “ನಮ್ಮ ಚಿತ್ರೋದ್ಯಮವನ್ನು ಬಿಟ್ಟುಬಿಡಿ ಎಂದು ಪ್ರಧಾನಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ನಿಮ್ಮ ಚುನಾವಣೆಗಾಗಿ ನಮ್ಮನ್ನು ಬಳಸಿಕೊಳ್ಳಬೇಡಿ. ನನಗೆ ಅವರ (ಬೆಂಬಲಿಸುತ್ತಿರುವ ನಟ ನಟಿಯರು) ಪರಿಸ್ಥಿತಿ ಅರ್ಥವಾಗಿದೆ. ಅವರಿಗೆ ಇಷ್ಟವಿಲ್ಲದಿದ್ದರೂ, ನಿಮಗೆ ನೋ ಹೇಳಲು ಹೇಗೆ ಸಾಧ್ಯ. ನೀವು ಕೊನೆಗೆ ಖಾನ್ಸ್ ಜತೆಗೆ ಸಂದರ್ಶನ ಮಾಡಿಕೊಂಡರೂ ಅಚ್ಚರಿಯಿಲ್ಲ. ದಯವಿಟ್ಟು ಅವರನ್ನು ಬಿಟ್ಟುಬಿಡಿ” ಎಂದಿದ್ದಾರೆ ಪೋನಿ ವರ್ಮಾ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರೈ ಸ್ಪರ್ಧಿಸಿದ್ದಾರೆ.

ಜನರಿಗೆ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಅವರು ರಾಜಕೀಯಕ್ಕೆ ಬಂದಿದ್ದಾರೆ. ಅವರಿಗೆ ಅವರ ನೋವು ಅರ್ಥವಾಗುತ್ತದೆ ಎಂದು ಪೋನಿ ವರ್ಮಾ ತಮ್ಮ ಗಂಡನನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಅವರು ದತ್ತು ತೆಗೆದುಕೊಂಡಿರುವ ಗ್ರಾಮಗಳಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here