ನಟ ಪ್ರಕಾಶ್ ರೈ ಅವರು ಸದಾ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಬಗ್ಗೆ ಒಂದಲ್ಲಾ‌ ಒಂದು ವಿಷಯಕ್ಕೆ ಟೀಕೆ ಮಾಡುವುದು ನಡೆಯುತ್ತಲೇ‌ ಇರುತ್ತದೆ. ಅದರಂತೆ ಈಗ ಅವರು ತಮ್ಮ ವರಸೆಯನ್ನು ಮುಂದುವರೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಗುರುವಾರ ರಾತ್ರಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಭಾನುವಾರದ ದಿನದಂದು ಜನತಾ ಕರ್ಫ್ಯೂ ಆಚರಣೆ ಮಾಡುವಂತೆ, ಎಲ್ಲರೂ ಮನೆಯಲ್ಲೇ ಉಳಿಯುವಂತೆ ಹೇಳಿದ್ದರು. ಅಲ್ಲದೆ ಸಂಜೆ ಐದು ಗಂಟೆಗೆ ಎಲ್ಲರೂ ತಮ್ಮ ಮನೆಗಳ ಮುಂದೆ ಅಥವಾ ಬಾಲ್ಕನಿಗಳಲ್ಲಿ ನಿಂತು ಕರೋನಾ ವಿರುದ್ಧ ಸಮರ ಸಾರಿರುವ ಎಲ್ಲಾ ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸಿ ಚಪ್ಪಾಳೆ ತಟ್ಟಿ ಎಂದು ಮನವಿಯೊಂದನ್ನು ಮಾಡಿದ್ದರು.

ಅದರಂತೆ ನಿನ್ನೆ ಸ್ವಯಂಪ್ರೇರಿತರಾದ ಜನರು ಜನತಾ ಕರ್ಫ್ಯೂ ಗೆ ಅಭೂತಪೂರ್ವ ಬೆಂಬಲವನ್ನು ನೀಡಿದ್ದರು. ಸಂಜೆ ಐದರ ವರೆಗೆ ಮನೆಗಳಲ್ಲೇ ಇದ್ದ ಜನರು,‌ ಸಂಜೆ ಮನೆಯಿಂದ ಹೊರಗೆ ಬಂದು ಚಪ್ಪಾಳೆ ಕೂಡಾ ತಟ್ಟಿದರು. ಆದರೆ ಕೆಲವೆಡೆ ಜನರು ಗುಂಪು ಗುಂಪಾಗಿ ಹೊರ ಬಂದು ಜಾಥಾದ ರೀತಿಯಲ್ಲಿ ಚಪ್ಪಾಳೆ ಇತರೆ ವಸ್ತುಗಳನ್ನು ಬಡಿಯುವ ಮೂಲಕ ಸೋಷಿಯಲ್‌ ಡಿಸ್ಟಂನ್ಸ್ ಮಾಡದೇ ಹೋದರು. ಅಲ್ಲದೆ ಇನ್ನೂ ಕೆಲವೆಡೆ ಐದರ ನಂತರ ಜನರು ಯಥಾಪ್ರಕಾರ ರಸ್ತೆಗೂ ಇಳಿದರು.

ಇದನ್ನೇ ನಟ ಪ್ರಕಾಶ್ ರೈ ಅವರ ತಮ್ಮ ವಿಷಯ ವಸ್ತುವನ್ನಾಗಿ ಇಟ್ಟುಕೊಂಡು ತಮ್ಮ ಟ್ವಿಟರ್ ಖಾತೆಯಲ್ಲಿ ರಸ್ತೆಗೆ ಗುಂಪು ಗುಂಪಾಗಿ ಬಂದಿರುವ ಜನರ ವಿಡಿಯೋ ಒಂದನ್ನು ಶೇರ್ ಮಾಡಿ, “ಯಥಾ ರಾಜ , ತಥಾ ಪ್ರಜಾ” ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಂತೆ ದೇಶದ ಪ್ರಜೆಗಳು ಕೂಡಾ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪರ, ವಿರೋಧ ಪ್ರತಿಕ್ರಿಯೆಗಳು ಬಂದಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here