ದೇಶಾದ್ಯಂತ ಕೋವಿಡ್ 19 ನಿಂದಾಗಿ ಲಾಕ್ ಡೌನ್ ಜಾರಿಯಾದ ಬಳಿಕ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪ್ರತಿದಿನ ಕಷ್ಟ ಅನುಭವಿಸಿದ್ದು ಪ್ರತಿಯೊಬ್ಬರೂ ನೋಡಿರುತ್ತೀರಾ. ಈ ಸಂದರ್ಭದಲ್ಲಿ ಸರ್ಕಾರ ಸಹ ಶ್ರಮಿಕ್  ರೈಲು ಸಹ ಆರಂಭಿಸಿ ವಲಸೆ ಕಾರ್ಮಿಕರಿಗೆ ನೆರವಾಗಲು ಪ್ರಯತ್ನಿಸಿತು. ಇದರ ಜೊತೆಗೆ ಹಲವಾರು ನಟ-ನಟಿಯರು ಸಮಾಜಸೇವಕರು ಸಹ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಲು ತಮ್ಮಿಂದಾಗುವ ಸೇವೆ ಮಾಡುತ್ತಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಪ್ರತಿನಿತ್ಯ ಸಾವಿರಾರು ಜನರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದರು. ಇದೀಗ ಅದೇ ರೀತಿ ನಮ್ಮ ಕನ್ನಡದವರೇ ಆದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪ್ರತಿದಿನ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಲು ಬಸ್  ಹಾಗೂ ಟಿಟಿ ವ್ಯವಸ್ಥೆ ಮಾಡುತ್ತಿದ್ದು  ಪ್ರಕಾಶ್ ರಾಜ್  ಅವರ ಈ ಸಮಾಜಸೇವೆ ಕೆಲಸಕ್ಕೆ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ವಲಸೆ ಕಾರ್ಮಿ ಕರನ್ನು ತಮ್ಮತಮ್ಮ ಊರುಗಳಿಗೆ ಕಳುಹಿಸುತ್ತಿರುವ ಪ್ರಕಾಶ್ ರಾಜ್ ಅವರು ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ.  ಈ ಮೊದಲು ಪ್ರಕಾಶ್ ರಾಜ್ ಅವರು ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಪ್ರತಿನಿತ್ಯ ಆಹಾರ ಒದಗಿಸಿ ಸುದ್ದಿ ಮಾಡಿದ್ದರು. ಇದೀಗ ವಲಸೆ ಕಾರ್ಮಿಕರಿಗೆ ವಾಹನದ ವ್ಯವಸ್ಥೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here