ನನ್ನ ಹತ್ಯೆಗೆ ಕೆಲವರು ಸಂಚನ್ನು ರೂಪಿಸಿದ್ದಾರೆ ಎಂದು ನಟ ಪ್ರಕಾಶ್ ರೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರೈ ಅವರಿಗೆ ಪತ್ರವೊಂದು ತಲುಪಿದ್ದು, ಅದರಲ್ಲಿ ಅನಾಮಧೇಯನೊಬ್ಬ ಧರ್ಮ ದ್ರೋಹಿ ಹಾಗೂ ದೇಶ ದ್ರೋಹಿಗಳನ್ನು ಹತ್ಯೆ ಮಾಡುವುದಾಗಿ ಪತ್ರವೊಂದನ್ನು ಬರೆದಿರುವ ಬಗ್ಗೆ ಅವರು ಹೇಳಿದ್ದು, ಪತ್ರದ ಫೋಟೋವನ್ನು ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ಪ್ರಕಾಶ್ ರೈ ಅವರ ಜೊತೆಗೆ ಇನ್ನೂ ಕೆಲವರ ಹೆಸರುಗಳನ್ನು ಕೂಡಾ ಬರೆಯಲಾಗಿದೆ. ಒಟ್ಟ ಹದಿನೈದು ಜನರ ಹೆಸರುಗಳನ್ನು ಒಳಗೊಂಡ ಪತ್ರ ಇದಾಗಿದೆ.

ಅನಾಮಧೇಯನು ಬರೆದಿರುವ ಈ ಪತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ನಿಜಗುಣಾನಂದ ಸ್ವಾಮೀಜಿ, ನಟ ಪ್ರಕಾಶ್​ರಾಜ್​, ಭಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್​, ಹಿರಿಯ ಸಾಹಿತಿ ಚಂದ್ರಶೇಖರಪಾಟೀಲ್, ಅಗ್ನಿಶ್ರೀಧರ್​, ನಟ ಚೇತನ್​, ಜ್ಞಾನ ಪ್ರಕಾಶ್, ಮಹೇಶ ಚಂದ್ರ ಗುರು ​ ಸೇರಿದಂತೆ ಒಟ್ಟು15 ಮಂದಿ ಹೆಸರು ಉಲ್ಲೇಖಿಸಲಾಗಿದೆ. ಪತ್ರದ ಕೊನೆಯಲ್ಲಿ ನಿಮ್ಮನ್ನೆಲ್ಲಾ ಸಂಹಾರ ಮಾಡೇ ಮಾಡುತ್ತೀವಿ ಎಂದು ಕೂಡಾ ಬರೆಯಲಾಗಿದೆ. ಈ ಪತ್ರವನ್ನು ಟ್ವೀಟ್ ಮಾಡಿರುವ ಪ್ರಕಾಶ್ ರೈ ಅವರು ಅದರ ಜೊತೆಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಅವರು, “ಗಾಂಧಿಯನ್ನು ಕೊಂದವರೆ.. ಗೌರಿಯನ್ನು ಕೊಂದವರೆ..
ಕೊಲ್ಲಬಲ್ಲಿರಿ ನನ್ನನ್ನೂ. ಕೊಲ್ಲಬಲ್ಲಿರಿ ನನ್ನನ್ನೂ.. ನನ್ನಂತ ಇನ್ನೂ ಹಲವರನ್ನೂ ಆದರೆ ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು.. ನಮ್ಮ ಸಂವಿಧಾನವನ್ನು.. ಎಲ್ಲರನ್ನೊಳಗೊಂಡ ಭಾರತೀಯತೆಯನ್ನು..
ನೋಡೇಬಿಡೋಣ ಎಂದು ಪದ್ಯದ ರೀತಿಯಲ್ಲಿ ಕೆಲವು ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here