KGF ಭಾರತ ಚಿತ್ರರಂಗದಲ್ಲಿ ಸಖತ್ ಸೆನ್ಸೇಷನಲ್ ಸೃಷ್ಟಿಸುತ್ತಿರುವ ಸಿನಿಮಾ. ಮೊದಲ ಬಾರಿಗೆ ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದು ಎಲ್ಲಾ ಭಾಷೆಯಲ್ಲಿ ಯಶಸ್ಸು ಪಡೆಯುತ್ತಿರುವ ಕೆಜಿಎಫ್ ಚಿತ್ರದ ಹಿಂದೆ ಹಲವಾರು ಜನರ ಶ್ರಮವಿದೆ. ಕೆಜಿಎಫ್ ಚಿತ್ರವನ್ನು ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಕೆಜಿಎಫ್ ಮೊದಲ ಭಾಗ ಈಗ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಕೆಜಿಎಫ್ ಚಿತ್ರತಂಡ ಸಂಭ್ರಮದಲ್ಲಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನೂರು ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಕೆಜಿಎಫ್ ಚಿತ್ರಕ್ಕೆ ಹೊಂಬಾಳೆ ಪ್ರೊಡಕ್ಷನ್ಸ್ ನ ವಿಜಯ್ ಕಿರಗಂದೂರು ಮತ್ತು ಕಾರ್ತಿಕ್ ಗೌಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು.

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಭಾರತಾದ್ಯಂತ ರಾಖಿ ಭಾಯ್ ಆಗಿ‌ ಜನಪ್ರಿಯತೆ ಪಡೆದರು ಈಗ ಕೆಜಿಎಫ್ ಚಿತ್ರದ ಅಸಲಿ‌ ಸೂತ್ರಧಾರ ಪ್ರಶಾಂತ್ ನೀಲ್ ಅವರ ಬಗ್ಗೆ ಎಲ್ಲಾ ಕಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಉಗ್ರಂ ಚಿತ್ರದ ಮೂಲಕವೇ ಕನ್ನಡಿಗರ ಮನಸ್ಸನ್ನು ಗೆದ್ದಿದ್ದ ಪ್ರಶಾಂತ್ ನೀಲ್ ಇದೀಗ ದೇಶದ ಸಿನಿರಸಿಕರ ಮನಸ್ಸನ್ನು ಗೆದ್ದಿದ್ದಾರೆ. ಕೆಜಿಎಫ್ ನಂತರ ಕೆಜಿಎಫ್ ಭಾಗ 2 ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಉಗ್ರಂ ವೀರಂ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ .ಆದರೆ ಪ್ರಶಾಂತ್ ನೀಲ್ ಅವರಿಗೆ ಈಗ ಹೊಸ ಆಫರ್ ಒಂದು ಬಂದಿದೆ. ಹೌದು

ಆಂದ್ರಪ್ರದೇಶದ ಖ್ಯಾತ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಆಪ್ತ ಗೆಳೆಯರು ಪ್ರಶಾಂತ್ ನೀಲ್ ಅವರನ್ನು ಸಂಪರ್ಕಿಸಿ ಪ್ರಭಾಸ್ ಅವರಿಗಾಗಿ ಸಿನಿಮಾ ಮಾಡಿಕೊಡುವಂತೆ ಪ್ರಶಾಂತ್ ನೀಲ್ ಅವರ ಬಳಿ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಅವರು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ . ಕೆಜಿಎಫ್ ಚಿತ್ರವನ್ನು ಪ್ರಭಾಸ್ ಅಂಡ್ ಟೀಂ ನೋಡಿ ಪ್ರಶಾಂತ್ ನೀಲ್ ಅವರಿಗೆ ಸಿನಿಮಾ ಮಾಡುವಂತೆ ಕೇಳಿದ್ದಾರೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here