ಕೆಜಿಎಫ್ ನ ನಂತರ ಕನ್ನಡ ಚಿತ್ರಗಳು ದಶ ದಿಕ್ಕುಗಳಲ್ಲೂ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಭಾರತೀಯ ಚಿತ್ರರಂಗ ಕನ್ನಡದತ್ತ ನೋಡುವಂತೆ ಮಾಡಿದೆ ಕೆಜಿಎಫ್. ಕನ್ನಡ ಚಿತ್ರಗಳ ಸ್ಥಾಯಿಯನ್ನು ಮತ್ತೊಂದು ಹಂತಕ್ಕೆ ಏರಿಸಿದೆ ಕೆಜಿಎಫ್. ಈ ಎಲ್ಲಾ ವಿಚಾರಗಳೂ ಕೂಡಾ ನಮಗೆಲ್ಲಾ ತಿಳಿದೇ ಇದೆ. ಆದರೆ ಈಗ ಇದಕ್ಕಿಂತ ಆಸಕ್ತಿಕರ ಹಾಗೂ ಬಿಗ್ ನ್ಯೂಸ್ ಅಥವಾ ಸೆನ್ಸೇಷನಲ್ ಕ್ರಿಯೇಟ್ ಮಾಡುವಂತಹ ಸುದ್ದಿಯೊಂದು ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದ್ದು, ಇದು ನಿಜಕ್ಕೂ ಆಶ್ಚರ್ಯ ಹಾಗೂ ಅದ್ಭುತವಾದ ಒಂದು ಹೊಸ ಪ್ರಯತ್ನಕ್ಕೆ ನಾಂದಿಯಾಗಲು ಹೊರಟಿದೆ. ಕೆಜಿಎಫ್ ನ ದಕ್ಷ ನಿರ್ದೇಶಕನಾದ ಪ್ರಶಾಂತ್ ನೀಲ್ ಅವರು ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಪ್ರಶಾಂತ್ ನೀಲ್ ಅವರು ಇಂದು ಹೊಸ ಚಿತ್ರ ನಿರ್ದೇಶನಕ್ಕೆ ಇಳಿಯುತ್ತಿದ್ದು, ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಲು ಹೊರಟಿದೆ. ಏಕೆಂದರೆ ಈ ಚಿತ್ರದ ಬಜೆಟ್ ಬರೋಬ್ಬರಿ 140 ಕೋಟಿ ರೂಗಳು‌. ಬಜೆಟ್ ನಿಂದಲೇ ಚಿತ್ರ ಇನ್ನೆಷ್ಟು ಅದ್ದೂರಿಯಾಗರಲಿದೆಯೆಂಬುದನ್ನು ಊಹಿಸಿಕೊಳ್ಳಬಹುದಾಗಿದೆ. ಇನ್ನು ಈ ಸಿನಿಮಾದ ತಾರಾಗಣದ ಬಗ್ಗೆ ಅಂತೂ ಅವರು ಕಾಂಪ್ರಮೈಸ್ ಆಗಲು ಸಿದ್ಧವಿಲ್ಲ. ಬಜೆಟ್ ಗೆ ತಕ್ಕ ಹಾಗೆ ಅದ್ದೂರಿ ತಾರಾಗಣ ಇದಕ್ಕೆ ಇದ್ದು, ಏಕಕಾಲದಲ್ಲಿ ಕನ್ನಡದ ಸ್ಟಾರ್ ನಟರನ್ನು ತೆರೆಯ ಮೇಲೆ ನೋಡಿ ಸಂತಸ ಪಡುವ ಅದೃಷ್ಟ ನಮ್ಮದಾಗಲಿದೆ.

ಇಷ್ಟಕ್ಕೂ ಈ ಚಿತ್ರದಲ್ಲಿ ನಟಿಸಲಿರುವ ಆ ಸ್ಟಾರ್ ಗಳು ಯಾರೆಂದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಕಿಂಗ್ ಸ್ಟಾರ್ ಯಶ್ , ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕ ನಟರಾಗಿ ನಟಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಇದೇ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು. ಈ ನಾಯಕರಿಗೆ ನಾಯಕಿರಾಗಿ ದಕ್ಷಿಣದ ಸುಪ್ರಸಿದ್ಧ ನಟಿಯರನ್ನು ಕರೆ ತರಲು ನಿರ್ಧರಿಸಲಾಗಿದೆ. ಅಂತೂ ಕನ್ನಡದಲ್ಲಿ ಒಂದು ಮಲ್ಟಿಸ್ಟಾರರ್ ಚಿತ್ರ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಲಿದೆ.  ಅಂದಹಾಗೆ ಇಂದು ನೀವು ಓದಿದ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ…ಇದು ಏಪ್ರಿಲ್ ಫೂಲ್ ಸ್ಪೆಷಲ್ ಆರ್ಟಿಕಲ್… ಕ್ಷಮೆ ಇರಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here