ಮಾಜಿ ಸಿಎಂ ಸಿದ್ಧರಾಮಯ್ಯನವರು ಹಾಡಿ ಹೊಗಳಿದ್ದಾರೆ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಅವರು. ಪ್ರತಾಪ್ ಸಿಂಹ ಅವರು ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ ಸಿದ್ಧರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಕೆಲಸವೊಂದನ್ನು ಬಹಳ ಮೆಚ್ಚುತ್ತಾ ಸಿದ್ಧರಾಮಯ್ಯನವರನ್ನು ಹೊಗಳುತ್ತಾ ಪೋಸ್ಟ್ ಹಾಕಿದ್ದಾರೆ. ಅವರು ಯಾವ ವಿಷಯಕ್ಕಾಗಿ ಸಿದ್ಧರಾಮಯ್ಯನವರನ್ನು ಹೊಗಳಿದ್ದು ಎನ್ನುವುದಾದರೆ ಅದು ಮೈಸೂರಿನ ಜಯದೇವ ಆಸ್ಪತ್ರೆಯ ನಿರ್ಮಾಣದ ಕುರಿತಾಗಿ. ಆಸ್ಪತ್ರೆಯ ಕುರಿತಾಗಿ ಮಾತನಾಡುತ್ತಾ ಅವರು ಸಿದ್ಧರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ.

ಪ್ರತಾಪ್ ಸಿಂಹ ಅವರು ತಮ್ಮ ಪೋಸ್ಟ್ ನಲ್ಲಿ
ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದ್ದು,ಅವರನ್ನು ನೋಡಲು ಹೋಗಿದ್ದೆ. ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಹೇಬ್ರಿಗೆ,ಉತ್ತಮ ಸೇವೆ ನೀಡುತ್ತಿರುವ ಡಾ. ಮಂಜುನಾಥ್ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಜೊತೆಗೆ ಜಯದೇವ ಆಸ್ಪತ್ರೆ ಇರುವ ಚಾಮರಾಜ ಕ್ಷೇತ್ರದ ಕಾಂಗ್ರೆಸ್‍ನ ಮಾಜಿ ಶಾಸಕ ವಾಸು, ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಮಂಜುನಾಥ್, ಡಾ.ಸದಾನಂದಗೌಡರಿಗೂ ಕೂಡಾ ಸಂಸದರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರತಾಪ್ ಸಿಂಹ ಅವರ ಈ ಪೋಸ್ಟ್ ಎಲ್ಲರ ಗಮನವನ್ನು ಸೆಳೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here