ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನಲ್ಲಿ ಶನಿವಾರ ರೈಲ್ವೆ ನಿಲ್ದಾಣದಲ್ಲಿ ಮೆಮು ರೈಲು ಉದ್ಘಾಟಿಸಿ ಮಾತನಾಡುತ್ತಾ, ನಾನು ಕ್ಷೇತ್ರದಲ್ಲಿ ಯಾರೂ ಮಾಡದ ಕೆಲಸಗಳನ್ನು ಮಾಡಿದ್ದೇನೆ ಎಂದು ಸಭೆಯಲ್ಲಿ ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಮಾತನಾಡುತ್ತಾ ಈ ಹಿಂದೆ ಕ್ಷೇತ್ರದಲ್ಲಿ ರಾಜಕೀಯ ನಾಯಕರು ಕೇವಲ ರಾಜಕಾರಣ ಮಾಡುವುದರಲ್ಲೇ ತಮ್ಮ ಕಾಲ ಹರಣ ಮಾಡಿದ್ದಾರೆ. ಆದರೆ ನಾನು ಆ ರೀತಿ ಅಲ್ಲ, ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರುತ್ತಿದ್ದೇನೆಂದು ಅವರು ಹೇಳಿದ್ದಾರೆ. ಅದು ಮಾತ್ರವಲ್ಲದೆ ಇದೇ ಸಂದರ್ಭದಲ್ಲಿ ಅವರು ಹೇಳಿದ ಮಾತೊಂದು ಗಮನ ಸೆಳೆದಿದೆ‌.

ಪ್ರತಾಪ್ ಸಿಂಹ ಅವರು, “ನಾನು ಕೋಲು ಹಿಡಿದುಕೊಂಡು ಓಡಾಡುವ ವಯಸ್ಸಿನವರೆಗೂ ರಾಜಕರಣ ಮಾಡಲು ಬಂದಿಲ್ಲ” ಎಂದಿದ್ದಾರೆ. ಹಾಗೆ ಮಾತು ಮುಂದುವರೆಸಿದ ಅವರು ನಾನು ಕ್ಷೇತ್ರದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದೇನೆ. 10 ವರ್ಷ ಸಂಸದನಾಗಿ ಏನೆಲ್ಲ ಕೆಲಸಗಳನ್ನು ಮಾಡಬಹುದೋ ಅದನ್ನೆಲ್ಲಾ ಮಾಡುವುದಾಗಿ ಹೇಳಿದ್ದಾರೆ. ಬಿ.ಎಸ್.ವೈ.
ಅವರು ಮುಖ್ಯಮಂತ್ರಿಯಾದ ವಿಚಾರದಲ್ಲಿ ಅವರು
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎನ್ನುವುದು ರಾಜ್ಯ ಜನತೆಯ ಆಶಯವಾಗಿತ್ತು ಎಂದಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ಅವರು ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಅವರಲ್ಲಿ ಒಗ್ಗಟ್ಟು ಎಂಬುದಿರಲಿಲ್ಲವಾದ್ದರಿಂದ ಸದನದಲ್ಲಿ ಬಹುಮತ ಪಡೆಯುವಲ್ಲಿ ವಿಫಲರಾದರು ಎಂದು ಹೇಳಿದ್ದಾರೆ. ಸೋಮವಾರ ಯಡಿಯೂರಪ್ಪ ನವರು ಬಹುಮತ ಸಾಬೀತು ಮಾಡುತ್ತಾರೆ. ನಮಗೆ ಪ್ರತಿಪಕ್ಷಕ್ಕಿಂತ ಒಂದು ಸಂಖ್ಯೆ ಹೆಚ್ಚು ಇದ್ದರೆ ಸಾಕು ಬಹುಮತ ಸಾಬೀತು ಮಾಡವುದಕ್ಕೆ ಸಮಸ್ಯೆ ಇರುವುದಿಲ್ಲವೆಂದು ಸಂಸದ ಪ್ರತಾಪ್​​ ಸಿಂಹ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here