ಪ್ರತ್ಯಂಗಿರಾ ದೇವಿ ಹೆಸರು ಕೇಳಿ ಯಾರು ಹೊಸ ದೇವತೆ ಎನಿಸಬಹುದು. ಆದರೆ ಈಕೆ ಹೊಸ ದೇವತೆಯಲ್ಲ. ಪುರಾಣ ಕಾಲದಿಂದಲೂ ಇರುವ ದೇವಿ. ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಸಿ ಪ್ರತ್ಯಂಗಿರಾ ದೇವಿ. ಆಕೆಯನ್ನು ಪೂಜಿಸುವ ವಿಧಾನ ಬಹಳ ಕಟ್ಟು ನಿಟ್ಟು, ಪುರಾಣಗಳಲ್ಲಿ ರಾಮ, ರಾವಣನ ಮಗ ಮೇಘನಾದ, ಕೃಷ್ಣ ಹಾಗೂ ಧರ್ಮರಾಯನು ಈ ದೇವಿಯನ್ನು ಪೂಜಿಸಿದ್ದರು. ಆದರೆ ಮುಂದೆ ಜನರು ಆಕೆಯನ್ನು ಪೂಜಿಸುವಲ್ಲಿ ಹಿಂದೇಟು ಹಾಕಿದ್ದರ ಪರಿಣಾಮ ಆಕೆಯ ಹೆಸರು ಹಾಗೂ ಆ ದೇವಿಯ ಆಲಯಗಳು ಅಷ್ಟಾಗಿ ಎಲ್ಲೂ ಪ್ರಚಲಿತವಾಗಲಿಲ್ಲ. ದೇಶದಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಈ ದೇವಿಯ ಆಲಯವಿದೆ.

ಮಹಾವಿಷ್ಣುವು ನರಸಿಂಹ ಅವತಾರದಲ್ಲಿ ಹಿರಣ್ಯ ಕಶಿಪುವನ್ನು ಸಂಹರಿಸಿದ ನಂತರ ಆತನ ಉಗ್ರ ರೂಪ ಶಾಂತವಾಗಲಿಲ್ಲ.‌ ಆಗ ನರಸಿಂಹನನ್ನು ಶಾಂತ ಗೊಳಿಸಲು ಮಹಾ ಶಿವನು ಉಗ್ರರೂಪ ತಾಳಿದಾಗ ಸೃಷ್ಟಿಯಾದ ಮಹಾಶಕ್ತಿ ದೇವಿ ಪ್ರತ್ಯಂಗೀರ. (ಆಕೆಯ ಉದ್ಭವದ ಬಗ್ಗೆ ವಿವಿಧ ಕಥೆಗಳಿವೆ) ಆಕೆ ಉಗ್ರ ನರಸಿಂಹನನ್ನು ಬಂಧಿಸಿ, ಆತನ ಕ್ರೋಧವನ್ನು ನಿಯಂತ್ರಿಸಿದ ಮಹಾಶಕ್ತಿ. ಆದಿ ಶಕ್ತಿಯ ಅತಿ ಉಗ್ರ ರೂಪ ಪ್ರತ್ಯಂಗಿರಾ ದೇವಿ. ಆಕೆಯನ್ನು ಆರಾಧಿಸಬೇಕಾದರೆ ಕಟ್ಟು ನಿಟ್ಟಿನ ನೇಮ ನಿಷ್ಠೆ ಗಳನ್ನು ಪಾಲಿಸಬೇಕು. ಪ್ರತ್ಯಾಂಗೀರ ದೇವಿಯು ಸಿಂಹವಾಹಿನಿ. ಈಕೆಯ ಮುಖ ಗಂಡು ಸಿಂಹವಾದರೆ, ದೇಹ ಸ್ತ್ರೀ ರೂಪ. ಇದು ಶಿವ ಶಕ್ತಿಯರ ಏಕತ್ವವನ್ನು ಸೂಚಿಸುತ್ತದೆ.

 

ಈಕೆ ಉಗ್ರ ನರಸಿಂಹ, ಮಹಾ ಕಾಳಿ, ಹಾಗೂ ದೇವಿ ದುರ್ಗೆಯರ ರೂಪದ ಸಮ್ಮಿಶ್ರಣ. ಆಕೆಯ ಶಕ್ತಿಗಳು ಲೋಕ ಭಯಂಕರ. ಮಹಾಶಕ್ತಿ ಈಕೆ. ಶತೃ ನಿವಾರಣೆ, ದಾರಿದ್ರ್ಯ ಹರಣ, ಉತ್ತಮ ಆರೋಗ್ಯ ಮತ್ತು ಶನಿ ಪ್ರಭಾವ ನಿವಾರಣೆಗೆ ಈಕೆಯನ್ನು ಆರಾಧಿಸಲಾಗುತ್ತದೆ. ನಾವು ಈ ದೇವಿಯನ್ನು ನಿಷ್ಠೆಯಿಂದ ಆರಾಧಿಸಿದರೆ ನಮಗೆ ಕೆಟ್ಟದ್ದನ್ನು ಬಯಸಿದವರಿಗೆ ಅದು ತಿರುಗುಬಾಣವಾಗುತ್ತದೆ ಎನ್ನಲಾಗಿದೆ. ಪ್ರತ್ಯಂಗೀರಾ ದೇವಿಯ ಆಲಯದಲ್ಲಿ ನಡೆಯುವ ಹೋಮಗಳಲ್ಲಿ ಒಣ ಮೆಣಸಿನಕಾಯಿ, ಹೂವನ್ನು ಅಗ್ನಿಗೆ ಸಮರ್ಪಣೆ ಮಾಡುವ ಮೂಲಕ ನಾವು ಆಕೆಯ ಕೃಪೆಯನ್ನು ಪಡೆಯಬಹುದು. ಎಂತಹುದೇ ಸಮಸ್ಯೆಯಾದರೂ ಪ್ರತ್ಯಂಗೀರಾ ದೇವಿಯ ಆರಾಧನೆ ಯಿಂದ ನಿವಾರಣೆ ಸಾಧ್ಯ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here