ರಾಣಾ-ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಅವರ ಹೊಸ ಸಿನಿಮಾ ಏಕ್ ಲವ್ ಯಾ ದ ಮೊದಲ ಟೀಸರ್ ಇಂದು ವ್ಯಾಲಂಟೇನ್ಸ್ ದಿನದ ವಿಶೇಷ ಎಂಬಂತೆ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆಯಾದ ಆರು ಗಂಟೆಗಳ ಅವಧಿಯಲ್ಲೇ ಎರಡು ಲಕ್ಷ ಗಡಿ ದಾಟಿದ ವೀಕ್ಷಕರ ಸಂಖ್ಯೆಯೊಂದಿಗೆ ಸದ್ದು ಮಾಡುತ್ತಿದೆ ಹೆಸರಿನಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿರೋ ಏಕ್ ಲವ್ ಯಾ. ಪ್ರೇಮ್ ಅವರ ನಿರ್ದೇಶನದ ಸಾರಥ್ಯದಲ್ಲಿ ಮೂಡಿ ಬಂದಿರುವ ಒಂದು ರೋಮಾಂಚಕ ಹಾಗೂ ಸುಂದರ ಪ್ರೇಮ ಕಥಾ ಚಿತ್ರ ಇದಾಗಿದ್ದು, ಪ್ರೇಮ್ ಈಸ್ ಬ್ಯಾಕ್ ವಿತ್ ಎ ಬ್ಯಾಂಗ್ ಎನ್ನುವಂತೆ ಇದೆ ಏಕ್ ಲವ್ ಯಾ‌ ಚಿತ್ರದ ಟೀಸರ್.

ಟೀಸರ್ ನ ಮೊದಲಲ್ಲೇ ಬರುವ ಡೈಲಾಗ್ “ಹುಡುಗಿಯರು ವೆದರ್ ಇದ್ದಂಗೆ ಯಾವಾಗ ಬರ್ತಾರೆ ಯಾವಾಗ ಹೋಗ್ತಾರೆ ಗೊತ್ತಾಗೋದೆ ಇಲ್ಲ, ಆದ್ರೆ ಹುಡುಗರು ವೆದರ್ ರಿಪೋರ್ಟ್‌ ಇದ್ದಂಗೆ ಇವಾಗ ಬರ್ತಾಳೆ, ಆವಾಗ ಬರ್ತಾಳೆ ಕಾಯ್ತಾನೇ ಇರ್ತಾರೆ” ಅನ್ನೋ ಸಾಲು ಅದ್ಭುತವಾಗಿದ್ದು, ರಾಣಾ ಪಕ್ಕಾ ಲವರ್ ಬಾಯ್ ಇಮೇಜ್ ನಲ್ಲಿ ಮಿಂಚಿದ್ದಾರೆ. ಟೀಸರ್ ನಲ್ಲಿ ರಚಿತಾ ರಾಮ್ ಅವರ ಹೊಸ ಬೋಲ್ಡ್ ಅವತಾರ ನೋಡುಗರ ಎದೆ ಬಡಿತವನ್ನು ಹೆಚ್ಚಿಸುವಂತಿದೆ, ಹೀರೋ ಹಾಗೂ ರಚಿತ ರಾಮ್ ಸಿಗರೇಟ್ ಹೊತ್ತಿಸಿಕೊಳ್ಳುತ್ತಾ ಇರುವ ದೃಶ್ಯ ಸಖತ್  ಡಿಫರೆಂಟ್ ಹಾಗೂ ಸಿನಿಮಾದ ಹೊಸತನವನ್ನು ಕಣ್ಮುಂದೆ ತಂದಿದೆ.

 

ಟೀಸರ್ ನಲ್ಲಿ ಕಂಡು ಬರುವ ಆ್ಯಕ್ಷನ್ ಸೀನ್ ಗಳು, ಬೋಲ್ಡ್ ಸೀನ್ ಗಳು ಏಕ್ ಲವ್ ಯಾ ಯಾವುದೇ ಬಾಲಿವುಡ್ ಸಿನಿಮಾಕ್ಕಿಂತ ಕಮ್ಮಿಯೇನಿಲ್ಲ ಎನ್ನುವಂತಿದೆ. ಟೀಸರ್ ನ ಕೊನೆಯಲ್ಲಿ ರಾಣಾ ಮತ್ತು ರಚಿತಾ ರಾಮ್ ಲಿಪ್ ಲಾಕ್ ದೃಶ್ಯ ನೋಡುಗರ ಎದೆ ಬಡಿತವನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನುವಂತಿದೆ. ಸಿನಿಮಾ ಯುವ ಜನರ ಹಾಟ್ ಫೇವರಿಟ್ ಆಗುವುದು ಎಂಬುದರಲ್ಲಿ ಅನುಮಾನವೇ ಇಲ್ಲ ಎನ್ನುವಂತಿದೆ ಏಕ್ ಲವ್ ಯಾ. ಅರ್ಜುನ್ ಜನ್ಯಾ ಅವರ ಸಂಗೀತ ದೃಶ್ಯಗಳ ಜೋಷ್ ಹೆಚ್ಚಿಸುವಂತೆ, ನೋಡುಗನ ಸೆಳೆಯುವಂತೆ ಇದೆ. ಪ್ರೇಮ್ ಅವರ ಏಕ್ ಲವ್ ಯಾ ಟೀಸರ್ ಅದ್ಭುತ ಎಂಬುದಕ್ಕೆ ಎರಡು ಮಾತಿಲ್ಲ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here