ಕಿರುತೆರೆಯಲ್ಲಿ ವಿಲನ್ ಪಾತ್ರಗಳ ಮೂಲಕ ತನ್ನ ಛಾಪನ್ನು ಮೂಡಿಸುವ ಮೂಲಕ ಜನಪ್ರಿಯತೆಯನ್ನು ಪಡೆದ ನಟಿ ಅಗ್ನಿ ಸಾಕ್ಷಿ ಚಂದ್ರಿಕಾ. ಅಂದರೆ ನಟಿ ಪ್ರಿಯಾಂಕ ಅವರು. ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 7 ರಲ್ಲಿ ಒಬ್ಬ ಸ್ಪರ್ಧಿಯಾಗಿ ಬಿಗ್ ಹೌಸ್ ಅನ್ನು ಪ್ರವೇಶ ಮಾಡಿರುವ ನಟಿ ಪ್ರಿಯಾಂಕ ಅವರು ಜನರ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ತೆರೆಯ ಮೇಲೆ ಖಳ ನಟಿಯಾಗಿ ಹೆಸರು ಪಡೆದ ಈ ಕಿರುತೆರೆಯ ಸುಪ್ರಸಿದ್ಧ ನಟಿಯ ರಿಯಲ್ ಲೈಫ್ ಬಗ್ಗೆ ಕೂಡಾ ಸ್ವಲ್ಪ ತಿಳಿಯೋಣ ಬನ್ನಿ. ತೆರೆ ಮೇಲೆ ಕಾಣುವ ಚಂದ್ರಿಕಾ ಹಾಗೂ ತೆರೆಯ ಹಿಂದೆ ನಿಜ ಜೀವನದಲ್ಲಿ ಚಂದ್ರಿಕಾ ಹೇಗೆ ಎಂಬುದರ ಬಗ್ಗೆ ಈ ವಿಷಯ.

ಚಂದ್ರಿಕಾ ಪಾತ್ರಧಾರಿ ಹೆಸರಿನಿಂದ ಸಖತ್ ಫೇಮಸ್ ಆಗಿರುವ ಪ್ರಿಯಾಂಕ ಅವರು ಮೂಲತಃ ಬೆಂಗಳೂರಿನವರು. ಇವರು ಓದಿದ್ದು ಇಂಜಿನೀಯರಿಂಗ್ ಮತ್ತು ಸಾಫ್ಟ್‌ವೇರ್ ಇಂಜಿನಿಯನರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದವರು. ಆದರೆ ಯಶಸ್ಸು ಸಿಕ್ಕಿರುವುದು ಮಾತ್ರ ನಟನೆಯಲ್ಲಿ ಎಂಬುದು ವಿಶೇಷ. ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ಅವರು ಕಿರುತೆರೆ ಗೆ ಪ್ರವೇಶ ಮಾಡಿ, ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದವರು. ಅವರು ಕಿರುತೆರೆಗೆ ಬಂದು ಆರು ವರ್ಷಗಳು ಕಳೆದಿವೆ.

ಪ್ರಿಯಾಂಕ ತಮ್ಮ ಖಳ ನಟಿಯ ಪಾತ್ರಕ್ಕಾಗಿ ಪ್ರತಿ ವರ್ಷ ಅತ್ಯುತ್ತಮ ಖಳನಾಯಕಿ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿದ್ದಾರೆ. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಈಕೆ ತಂದೆಯನ್ನು ಕಳೆದುಕೊಂಡ ಮೇಲೆ ಸ್ವತಂತ್ರವಾಗಿ ಕುಟುಂಬ ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನ ಧಾರಾವಾಹಿಗಳಲ್ಲಿ ಕೂಡಾ ನಟಿಸಿ ಸೈ ಎನಿಸಿ ಕೊಂಡ ಇವರು, ಇನ್ಸ್ಟಾಗ್ರಾಂ ನಲ್ಲಿ ಬಹಳಷ್ಟು ಆಕ್ಟೀವ್ ಆಗಿರುತ್ತಾರೆ. ಸದ್ಯ ಪ್ರಿಯಾಂಕ ಅವರು ಬಿಗ್ ಬಾಸ್ 7 ರಲ್ಲಿ ಸ್ಪರ್ಧಿಯಾಗಿ ಎಲ್ಲರನ್ನು ತಮ್ಮ ರಿಯಲ್ ಕ್ಯಾರೆಕ್ಟರ್ ಮೂಲಕ ಸೆಳೆಯುವ ಯತ್ನದಲ್ಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here