ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಪ್ರಿಯಾಂಕ ಗಾಂಧಿಯವರು ಒಂದು ಜನ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ. ಅವರು ಮಾಡಿರುವ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ಕೂಡಾ ವ್ಯಕ್ತವಾಗಿದೆ. ಪ್ರಿಯಾಂಕ ಗಾಂಧಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವೊಂದನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಲು ನೆರವಾಗಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರ ಬೇಡಿಕೆಗೆ ಬೇಗ ಸ್ಪಂದಿಸಿದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಖಾಸಗಿ ವಿಮಾನದ ಮೂಲಕ ದೆಹಲಿಗೆ ಏರ್​ಲಿಫ್ಟ್​ ಮಾಡಿಸಲು ನೆರವಾಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಕಮಲಾ ನೆಹರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದು , ಟ್ಯೂಮರ್​ನಿಂದ ಬಳಲುತ್ತಿದ್ದ ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ, ಆಸ್ಪತ್ರೆಯ ವೈದ್ಯರು ಬಾಲಕಿಯು ಬದುಕುವುದು ಕಷ್ಟವೆಂದು ತಿಳಿಸಿದ್ದಾರೆ. ಆಗ ಪ್ರಯಾಗ್ ರಾಜ್ ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್​ ನಾಯಕ ರಾಜೀವ್​ ಶುಕ್ಲಾ ಅವರು ವಿಷಯವನ್ನು ತಿಳಿದು, ಈ ಕುರಿತು ಸಹಾಯವನ್ನು ಕೋರಿ, ಪ್ರಿಯಾಂಕಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಲಕಿಗೆ ದೆಹಲಿಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸಲು ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ರಾಜೀವ್ ಶುಕ್ಲಾ ಅವರ ಮನವಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿಯವರು ಶುಕ್ರವಾರ ಸಂಜೆ ತಮ್ಮ ಖಾಸಗಿ ಜೆಟ್​ ವಿಮಾನದಲ್ಲಿಯೇ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ಕಳುಹಿಸಿದ್ದಾರೆ ಹಾಗೂ ದಾಖಲಿಸುವ ಮೂಲಕ ಆ ಬಾಲಕಿಗೆ ಸೂಕ್ತ ಚಿಕಿತ್ಸೆ ದೊರೆಯಲು ನೆರವಾಗಿದ್ದಾರೆ.
ಪ್ರಿಯಾಂಕ ಅವರು ಸೂಕ್ತ ಸಮಯದಲ್ಲಿ ಒದಗಿಸಿರುವ ಸಹಾಯ ಹುಡುಗಿಯ ಪ್ರಾಣ ರಕ್ಷಣೆಗೆ ನೆರವಾದರೆ ಅದಕ್ಕಿಂತ ಸಂತಸ ಮತ್ತೊಂದಿರುವುದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here