ಅಯೋಧ್ಯೆಯಲ್ಲಿ ಐತಿಹಾಸಿಕ ಸಮಾರಂಭ, ಶ್ರೀ ರಾಮಮಂದಿರ ನಿರ್ಮಾಣಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದೆ. ಈ ಬೆಳವಣಿಗೆಗಳ ನಡುವೆ ಆಶ್ಚರ್ಯಕರ ಎಂಬಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಅವರ ಕಡೆಯಿಂದ ರಾಮಮಂದಿರ ನಿರ್ಮಾಣದ ಕುರಿತಾಗಿ ಪ್ರತಿಕ್ರಿಯೆಯೊಂದು ಹೊರ ಬಂದಿದೆ. ಪ್ರಿಯಾಂಕಾ ವಾದ್ರಾ ಅವರು ಜೈ ಸಿಯಾರಾಮ್ (ಸೀತಾರಾಮ) ಎನ್ನುವ ಘೋಷಣೆಯೊಂದಿಗೆ ಟ್ವೀಟ್ ಒಂದನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರಿಯಾಂಕ ತಮ್ಮ ಟ್ವೀಟ್ ನಲ್ಲಿ, “ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆ, ದೀನಬಂಧು ಎಂಬುದು ರಾಮ ಎಂಬ ಹೆಸರಿನ ಮೂಲತತ್ವ. ರಾಮನು ಎಲ್ಲರಲ್ಲೂ ಹಾಗೂ ಎಲ್ಲರೊಂದಿಗೂ ಇದ್ದಾನೆ ಎಂದಿದ್ದು, ಭಗವಾನ್ ರಾಮ ಮತ್ತು ತಾಯಿ ಸೀತಾ ಅವರ ಸಂದೇಶ ಮತ್ತು ಅನುಗ್ರಹದಿಂದ, ರಾಮಲಲ್ಲನ ದೇವಾಲಯದ ಭೂಮಿ ಪೂಜೆ ಸಮಾರಂಭವು ನಡೆಯಲಿದ್ದು, ಇದು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಸಂದರ್ಭವಾಗಲಿ” ಎಂದು ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಮ ಜನ್ಮ ಭೂಮಿಯ ವಿವಾದ ಕೋರ್ಟ್ ನಲ್ಲಿ ಇದ್ದಂತಹ ಸಮಯದಲ್ಲಿ ರಾಮನ ಅಸ್ತಿತ್ವದ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆ ಇಲ್ಲವೆಂದು, 2007 ರಲ್ಲಿ ಕಾಂಗ್ರೆಸ್​ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂ ಕೊರ್ಟ್​ನಲ್ಲಿ ಅಫಿಡಿವಿಟ್ ಅನ್ನು ಸಲ್ಲಿಸಿತ್ತು ಎಂಬುದು ಕೂಡಾ ವಾಸ್ತವ. ಅಲ್ಲದೇ ಆಗ ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸಗಳು ಸಾಹಿತ್ಯವಾಗಿ ಅತ್ಯಂತ ಪ್ರಮುಖ ಆಕರಗಳಾಗಿದ್ದರೂ ಕೂಡಾ ಅವುಗಳನ್ನು ಇತಿಹಾಸವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿತ್ತು.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here