ಒಂದು 50 ರೂ ನ ನೋಟಿನ ಮೇಲೆ ಬರೆದಿರುವ  “ಟಾರ್ಗೆಟ್ ಬಾಳೆಹೊನ್ನೂರು. ಭಾರತೀಯರನ್ನು ನಾವು‌ ಬಿಡುವುದಿಲ್ಲ. ನಾವು ಪಾಕಿಸ್ತಾನದಿಂದ ಆರು ಜನ‌ ಬಂದಿದ್ದೇವೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದೇವೆ” ಅಂತೆಲ್ಲ 50 ರೂಪಾಯಿ ನೋಟಿನ ಮೇಲೆ ಬರೆಯಲಾಗಿದ್ದು, ಇದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪಟ್ಟಣದ ಜನರಲ್ಲಿ ಆತಂಕ ಮನೆಮಾಡಿದೆ. ಕೊಪ್ಪ, ಬಾಳೆಹೊನ್ನೂರು ಭಾಗದಲ್ಲಿ ಈ ರೀತಿಯ ಬರಹ ಇರುವ ನೋಟಿನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈವರೆಗೂ ಈ ನೋಟು ಯಾರ ಬಳಿ ಇದೆ ಎಂಬುದು ಗೊತ್ತಾಗಿಲ್ಲ. ಅಲ್ಲದೇ ಇದನ್ನು  ಸಾಮಾಜಿಕ‌ ಜಾಲತಾಣಗಲ್ಲಿ ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದು ಸಹ ತಿಳಿದುಬಂದಿಲ್ಲ.

ಮಲೆನಾಡು ಭಾಗವಾದ ಬಾಳೆಹೊನ್ನೂರು, ಕೊಪ್ಪ, ಕಳಸ ಸೇರಿದಂತೆ ಈ ಭಾಗದಲ್ಲಿ ಸಾಕಷ್ಟು ಕಾಫಿ ತೋಟಗಳಿದ್ದು ಇಲ್ಲಿ ಸಾವಿರಾರು ಜನ ಬಾಂಗ್ಲಾ ವಲಸಿಗರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ವಿಷಯ ಸಹಜವಾಗಿಯೇ ಈ ಭಾಗದ ಜನರನ್ನು ಆತಂಕಗೊಳಿಸಿದೆ. ಪೊಲೀಸರಿಗೆ ಈವರೆಗೂ ಈ ನೋಟಿನ ಕುರಿತು ಮಾಹಿತಿ ದೊರೆತಿಲ್ಲ. ಆತಂಕ ಸೃಷ್ಟಿಸಲೆಂದೇ ಯಾರೋ ದುಷ್ಕರ್ಮಿಗಳು ಮಾಡಿರುವ ಕೆಲಸವಿರಬಹುದು ಎಂದು ಶಂಕಿಸಲಾಗಿದೆ.

ಅಷ್ಟೇ ಅಲ್ಲದೇ ದತ್ತಮಾಲೆ ಸಂದರ್ಭದಲ್ಲಿ ಈ ರೀತಿಯಾಗಿ ದುಷ್ಕರ್ಮಿಗಳು ಧರ್ಮ-ಧರ್ಮಳ ನಡುವೆ ಬೆಂಕಿ ಹಚ್ಚೋ ಕೆಲಸ ಮಾಡಿರುವ ಸಾಧ್ಯತೆಗಳು ಸಹ ಇವೆ.ಈ ವಿಷಯವನ್ನು ಪೊಲೀಸರು  ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಳೆಹೊನ್ನೂರು ಸಿಪಿಐ, ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಿಂದ ತನಿಖೆ‌ ನಡೆಸುತ್ತಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here