ಕೋವಿಡ್-19 ಅನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಲು, ಅದನ್ನು ಹತೋಟಿಗೆ ತರಲು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಜಗಿಯುವ ತಂಬಾಕು ಉತ್ಪನ್ನಗಳನ್ನು ಮತ್ತು ಪಾನ್ ಮಸಾಲ ಉತ್ಪನ್ನಗಳನ್ನು ಸೇವಿಸುವುದನ್ನು ಆರೋಗ್ಯ ಇಲಾಖೆಯು ನಿಷೇಧ ‌ಮಾಡಿ ಆದೇಶವೊಂದನ್ನು ಜಾರಿ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗುವುದು ಹಾಗೂ ಅಪರಾಧ ಸಾಬೀತಾದರೆ ಆರು ತಿಂಗಳಿಂದ ಸುಮಾರು ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ಕೂಡಾ ವಿಧಿಸಲಾಗುವುದು ಎಂದು ತಿಳಿಸಿದೆ‌.

ಕೊರೊನಾ ಸೋಂಕು ತಡೆಯಲು ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇನ್ನಷ್ಟು ಕಠಿಣ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ಈಗ ಉಗುಳುವುದು, ತಂಬಾಕು ಜಗಿಯುವ ಹಾಗೂ ಪಾನ್ ಮಸಾಲ ಉತ್ಪನ್ನಗಳ ಸೇವನೆಯನ್ನು ನಿಷೇಧ ಮಾಡಲಾಗಿದೆ.‌
ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಎಚ್ಚರಿಕೆ ನೀಡಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.

ಈ ಉತ್ಪನ್ನಗಳಿಂದ, ಉಗುಳುವಿಕೆಯಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು ಈಗಾಗಲೇ ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಲ್ಲಾ ರೀತಿಯ ಜಗಿಯುವ ತಂಬಾಕು ಮತ್ತು ಪಾನ್ ಮಸಾಲ ಉತ್ಪನ್ನಗಳನ್ನು ನಿಷೇಧ ಮಾಡಲಾಗಿದೆ. ಈಗ ಅದೇ ರೀತಿ ರಾಜ್ಯದಲ್ಲೂ ಕೂಡಾ ನಿಷೇಧ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ. ಇನ್ನು ಈಗ ಕಾನೂನು ಉಲ್ಲಂಟನೆ ಮಾಡಿದರೆ, ಕಾಯಿದೆ ಅನ್ವಯ ಯಾವ ಶಿಕ್ಷೆ ಎಂಬುದು ಈ ಕೆಳಗಿನಂತೆ ಇವೆ.

ಐಪಿಸಿ ಸೆಕ್ಷನ್‌ 188: ಸರ್ಕಾರದ ಆದೇಶಕ್ಕೆ ಧಿಕ್ಕಾರ: ದಂಡ/6 ತಿಂಗಳ ವರೆಗೆ ಜೈಲು.

ಐಪಿಸಿ ಸೆಕ್ಷನ್‌ 268: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ, ಇತರರಿಗೆ ತೊಂದರೆ ಮಾಡುವುದು.

ಐಪಿಸಿ ಸೆಕ್ಷನ್‌ 269: ಇನ್ನೊಬ್ಬರಿಗೆ ಸೋಂಕು ತಗುಲಿಸುವುದು: 6 ತಿಂಗಳವರೆಗೆ ಜೈಲು/ದಂಡ.

ಐಪಿಸಿ ಸೆಕ್ಷನ್‌ 270: ಇನ್ನೊಬ್ಬರಿಗೆ ಪ್ರಾಣಕ್ಕೆ ಅಪಾಯವಾಗಬಲ್ಲ ಸೋಂಕು ತಗುಲಿಸುವುದು: 2 ವರ್ಷವರೆಗೆ ಜೈಲು/ದಂಡ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here