ಕಳೆದ ತಿಂಗಳು ಅಂದರೆ ಪೆಬ್ರವರಿ 14 ಭಾರತೀಯರ ಪಾಲಿಗೆ ಅತ್ಯಂತ ಕರಾಳ‌ ದಿನ. ಅಂದು ಭಯೋತ್ಪಾದಕ ದಾಳಿಗೆ ದೇಶದ ನಲವತ್ತಕ್ಕೂ ಹೆಚ್ಚು ಸೈನಿಕರು ಒ್ರಾಣ ಅರ್ಪಿಸಿದ ದಿನ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರನ್ನು ಗುರಿಯಾಗಿಸಿ ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಜಿಲ್ಲೆಯ ವೀರ ಯೋಧರೊಬ್ಬರು ಗಾಯಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಸೋಮವಾರ ತವರಿಗೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.ಭಾಲ್ಕಿ ತಾಲೂಕಿನ ಸೇವಾಲಾಲ ತಾಂಡಾದ ಯೋಧ ಮನೋಹರ ಕಾಶೀನಾಥ ರಾಠೋಡ್ ಅವರು ಪುಲ್ವಾಮಾ ಉಗ್ರರ ದಾಳಿಯಲ್ಲಿ ಗಂಭೀರ ಗಾಯಗೊಂಡು ಸಾವು ಗೆದ್ದು ಸ್ವಗ್ರಾಮಕ್ಕೆ ಮರಳಿದ್ದಾರೆ. ಮನೋಹರ ಕುಟುಂಬ ಸದ್ಯ ನೌಬಾದ್ನಲ್ಲಿ ನೆಲೆಸಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಮನೋಹರ ಸಿಆರ್​ಪಿಎಫ್​ನಲ್ಲಿದ್ದು ಫೆ.14ರಂದು ನಡೆದ ಉಗ್ರರ ದಾಳಿಯಲ್ಲಿ 44 ಯೋಧರ ಸಮೇತ ಛಿದ್ರಗೊಂಡಿದ್ದ ವಾಹನದ ಹಿಂದಿನ ಬಸ್ನಲ್ಲೇ ಪ್ರಯಾಣಿಸುತ್ತಿದ್ದರು.ಮುಂದಿನ ಬಸ್ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಹಿಂದಿನ ಬಸ್​ನಲ್ಲಿದ್ದ ಮನೋಹರ ಅವರಿಗೂ ಗಂಭೀರ ಗಾಯಗಳಾಗಿದ್ದವು. ಕಾಲು, ತಲೆ ಇತರ ಭಾಗಕ್ಕೆ ಪೆಟ್ಟಾಗಿತ್ತು. ಸ್ಫೋಟವಾಗುತ್ತಲೇ ಮನೋಹರ ಮೂರ್ಛೆ ಹೋಗಿದ್ದರು. ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗುಣಮುಖರಾದ ನಂತರ ಮನೋಹರ ವೈದ್ಯಕೀಯ ರಜೆ ಮೇಲೆ ಇಲ್ಲಿಗೆ ಬಂದಿದ್ದಾರೆ. ಸಾವು ಗೆದ್ದು ಬಂದಿದ್ದರಿಂದ ಯೋಧನ ಮನೆ ಹಾಗೂ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.2000ರಲ್ಲಿ ಸೇನೆಗೆ ಸೇರಿದ ಮನೋಹರ ರಾಠೋಡ್ ಅವರು ಗಡಿ ಸೇರಿ ದೇಶದ ವಿವಿಧೆಡೆ ಕರ್ತವ್ಯ ನಿಭಾಯಿಸಿದ್ದಾರೆ. 20 ವರ್ಷ ಮುಗಿದ ನಂತರ ಸೇವಾ ನಿವೃತ್ತಿ ಪಡೆಯಬಹುದು ಅಥವಾ ಮುಂದುವರಿಯಬಹುದು. ರಾಠೋಡ್ ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿ ಇದ್ದಾರೆ.

ದೇವರ ಕೃಪೆಯಿಂದ ಬದುಕಿ ಬಂದಿದ್ದೇನೆ. ಉಗ್ರರು ಹೇಡಿಗಳಂತೆ ದಾಳಿ ಮಾಡುತ್ತಾರೆ. ಅವರಿಗೆ ಬಗ್ಗುಬಡಿಯಲು ಸೇನೆ ಸಮರ್ಥವಿದೆ. ಇಂಥ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಭಾರತವನ್ನು ಉಗ್ರರ ಮುಕ್ತವಾಗಿ ಮಾಡಲು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು ಎನ್ನುತ್ತಾರೆ ಮನೋಹರ ರಾಠೋಡ್. ಮನೋಹರ ಮೊ. 09284454780. ಅಕೌಂಟ್ ಸಂಖ್ಯೆ ಎಸ್ಬಿಐ 11063332704, ಐಎಫ್ಎಸ್ಸಿ ಕೋಡ್ ಎಸ್ಬಿಐಎನ್ 0001972.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here