ಭಾರತ ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನದ ಉಗ್ರರ ಮೇಲೆ ಮಾಡಿದ್ದ ವಾಯುಸೇನೆಯ ದಾಳಿಯಲ್ಲಿ ಉಗ್ರರು ಎಷ್ಟು ಮಂದಿ ಸತ್ತಿದ್ದರು ? ಇದು ಸದ್ಯ ಎಲ್ಲಾ ಕಡೆ ಹರಿದಾಡುತ್ತಿರುವ ಪ್ರಶ್ನೆ ಆಗಿದೆ. ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರವನ್ನು ಗುರಿಯನ್ನಾಗಿಸಿಕೊಂಡು ಏರ್ ಸ್ಟ್ರೈಕ್ ನಡೆಸಿತ್ತು. ಇದಕ್ಕೆ ಸಾಕ್ಷಿ ನೀಡುವಂತೆ ನಮ್ಮ ರಾಜಕಾರಣಿಗಳು ಪಟ್ಟು ಹಿಡಿದಿದ್ದು ಈ ಮಧ್ಯೆ ಪ್ರತ್ಯಕ್ಷದರ್ಶಿಗಳೇ ಅಲ್ಲಿನ ಸಾವು ನೋವಿನ ಬಗ್ಗೆ ವಿವರಿಸಿದ್ದಾರೆ. ಭಾರತ ನಡೆಸಿದ ಏರ್ ಸ್ಟ್ರೈಕ್ ಸ್ಥಳದಲ್ಲಿ 35ಕ್ಕೂ ಹೆಚ್ಚು ಮೃತದೇಹಗಳನ್ನು ನೋಡಿದ್ದಾಗಿ ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇನ್ನು ದಾಳಿ ನಡೆದ ಒಂದು ಗಂಟೆಯ ನಂತರ ಆ ಮೃತದೇಹಗಳನ್ನು ಆ್ಯಂಬುಲೆನ್ಸ್ ನಲ್ಲಿ ಸಾಗಿಸಲಾಯಿತು. ಸುಮಾರು 12 ಮಂದಿ ತಾತ್ಕಾಲಿಕವಾದ ಮರದ ಒಂದೇ ಕಟ್ಟಡದಲ್ಲಿ ಇದ್ದರು. ದಾಳಿಯಲ್ಲಿ ಹಲವು ಮಂದಿ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿದವರು ದಾಳಿ ವೇಳೆ ಹತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದಾಳಿಯ ಕುರಿತ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ನೀಡಬಾರದು ಎಂದು ಅಲ್ಲಿ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು ಎಂದು ಮೂಲಗಳು ಹೇಳಿವೆ. ಅಲ್ಲದೇ ಪ್ರತೀಕಾರದಿಂದ ಅವರು ಬೆಚ್ಚಿಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಫಸ್ಟ್ ಪೋಸ್ಟ್ ವಿಶೇಷ ವರದಿ ಪ್ರಕಟಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here