ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಿಂದು, ಮುಸ್ಲಿಂ, ಸಿಖ್, ಇಸಾಯಿ ಫೌಂಡೇಷನ್ ಆಯೋಜನೆ ಮಾಡಿದ್ದಂತಹ ಸಿಎಎ ಪ್ರತಿಭಟನೆಯ ಸಮಾವೇಶದಲ್ಲಿ ಪಾಕ್ ಪರವಾಗಿ ಘೋಷಣೆ ಕೂಗಿದ್ದ
ಅಮೂಲ್ಯ ಲಿಯೋನಾ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದು, ವಿಶೇಷ ತನಿಖಾ ದಳ ಈ ವಿಷಯದ ಕುರಿತಾಗಿ ತನಿಖೆಯನ್ನು ನಡೆಸಿದ್ದಾರೆ. ಆದರೆ ಈ ನಡುವೆ ಮತ್ತೊಂದು ವಿಷಯ ತಡವಾಗಿ ಹೊರಬಂದಿದ್ದು, ಈ ಹಿಂದೆ ಅಮೂಲ್ಯ ಸ್ಯಾಂಡಲ್ ವುಡ್ ನಟರ ಬಗ್ಗೆ ಕೂಡಾ ಟೀಕೆ ಮಾಡಿದ್ದರು ಎನ್ನುವ ವಿಷಯ ಅನಂತರ ತಿಳಿದು ಬಂದಿದೆ. ಸದ್ಯಕ್ಕೆ ಅಮೂಲ್ಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನದಲ್ಲಿರುವುದು ತಿಳಿದಿದೆ.

ಕಳೆದ ಒಂದು ತಿಂಗಳ ಹಿಂದೆ ಸಿಎಎ ವಿರೋಧಿ ಭಾಷಣವನ್ನು ಮಾಡುತ್ತಾ ಸ್ಯಾಂಡಲ್ ವುಡ್ ನಟರಾದ ದರ್ಶನ್ , ಪುನೀತ್ ರಾಜ್‍ಕುಮಾರ್ ಅವರನ್ನು ಟೀಕಿಸಿದ್ದರು. ಜನವರಿ 18 ರಂದು ಶಿವಾಜಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಆಯೋಜನೆ ಮಾಡಿದ್ದ ಸಿಎಎ ವಿರುದ್ಧದ ಸಮಾವೇಶದಲ್ಲಿ ಭಾಷಣ ಮಾಡುವ ಭರದಲ್ಲಿ ಅಮೂಲ್ಯ ಲಿಯೋನಾ ಅವರು ಸ್ಯಾಂಡಲ್ ವುಡ್ ನಟರ ವಿರುದ್ಧ ಟೀಕೆಯನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಆಕೆ ಮಾತನಾಡುತ್ತಾ ಸಿಎಎ ವಿರೋಧಿ ಪ್ರತಿಭಟನೆಗೆ ಎಂಎಲ್ಎಗಳು, ಎಂಪಿಗಳು ಬೀದಿಗಿಳಿದು ಹೋರಾಟ ಮಾಡಬೇಕು ಎಂದಿದ್ದರು.

ಆಗ ಸಿಎಎ ವಿರುದ್ಧ ಕನ್ನಡ ನಟರು ಯಾರೂ ಮಾತನಾಡಿಲ್ಲ. ದರ್ಶನ್ , ಪುನೀತ್ ರಾಜ್‍ಕುಮಾರ್, ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಸ್ಟಾರ್ ನಟರೆಲ್ಲಾ ಮೌನವಾಗಿದ್ದಾರೆ ಎಂದು ಆಕೆ ಅಸಮಾಧಾನವನ್ನು ಹೊರಹಾಕಿದ್ದಳು. ಚಿಕ್ಕ ಮಂಗಳೂರಿನ ಮೂಲದ ಅಮೂಲ್ಯ ಬೆಂಗಳೂರಿನಲ್ಲಿ ಪದವಿ ಮಾಡುತ್ತಿದ್ದು ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಈಕೆ ಸ್ವಯಂ ಪ್ರೇರಣೆ ಯಿಂದ ಭಾಷಣಗಳನ್ನು ಮಾಡುತ್ತಿದ್ದಳು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here