ದೊಡ್ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅಣ್ಣಾವ್ರ ಮೊಮ್ಮಗ , ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಯುವರಾಜ್ ಕುಮಾರ್ ಅವರ ವಿವಾಹ ಮಹೋತ್ಸದ ಇದೇ ತಿಂಗಳಲ್ಲಿ ಇದ್ದು , ಮನೆ ಮಂದಿಯೆಲ್ಲ ಈಗಾಗಲೇ ಮದುವೆ ಸಿದ್ಧತೆಯಲ್ಲಿ ತೊಡಗಿದ್ದು, ಸಿನಿಮಾ ಗಣ್ಯರನ್ನು ಹಾಗೂ ಆತ್ಮೀಯರನ್ನು ಮದುವೆಗೆ ಆಹ್ವಾನಿಸುವ ಕಾರ್ಯವು ಭರದಿಂದ ನಡೆಯುತ್ತಿದೆ. ಈಗಾಗಲೇ ಹಲವು ಸೆಲೆಬ್ರಿಟಿ ಗಳಿಗೆ ವಿವಾಹದ ಕರೆಯೋಲೆಯನ್ನು ನೀಡಿ ಬಂದಿದ್ದಾರೆ. ಈಗ ದೊಡ್ಮನೆಯೊಂದಿಗೆ ಮೊದಲಿನಿಂದಲೂ ಆಪ್ಯಾಯತೆ ಹೊಂದಿರುವ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕೂಡಾ ವಿವಾಹ ಆಮಂತ್ರಣ ಪತ್ರಿಕೆ ನೀಡಲಾಗಿದೆ.

ಖುದ್ದಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ತೇಜಾ ಅವರ ಮನೆಗೆ ಹೋಗಿ ಯುವರಾಜ್ ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ಪುನೀತ್ ಅವರ ಜೊತೆಗೆ ರಾಘಣ್ಣ ನವರ ಇಬ್ಬರು ಮಕ್ಕಳಾದ ವಿನಯ್ ರಾಜ್‍ಕುಮಾರ್ ಹಾಗೂ ಮದುವೆ ಗಂಡು ಯುವರಾಜ್ ಕುಮಾರ್ ಕೂಡಾ ಹೋಗಿದ್ದು, ಮೂವರು ಆಹ್ವಾನ ಪತ್ರಿಕೆ ನೀಡಿ, ಮದುವೆಗೆ ಮೆಗಾಸ್ಟಾರ್ ಹಾಗೂ ಅವರ ಪುತ್ರನನ್ನು ಆಮಂತ್ರಿಸಿದ್ದಾರೆ. ಕೆಲ ಸಮಯ ಅಲ್ಲೇ ಇದ್ದು ಉಭಯಕುಶಲೋಪರಿ ಮಾತಾಡಿಕೊಂಡು ಬಂದಿದ್ದಾರೆ.

ಡಾ.ರಾಜ್ ಅವರ ಕುಟುಂಬಕ್ಕೂ ಹಾಗೂ ಚಿರಂಜೀವಿ ಅವರ ಕುಟುಂಬಕ್ಕೂ ಹಿಂದಿನಿಂದಲೂ ಉತ್ತಮ ಒಡನಾಟವಿದ್ದು, ಪುನೀತ್ ಹಾಗೂ ರಾಮ್ ಚರಣ್ ಇಬ್ಬರೂ ಒಳ್ಳೆಯ ಸ್ನೇಹಿತರು ಎಂಬ ವಿಷಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಅದಕ್ಕೆ ಖುದ್ದು ಪುನೀತ್ ಅವರು ಹೋಗಿ ಆಮಂತ್ರಣ ನೀಡಿದ್ದಾರೆ. ಯುವರಾಜ್ ಕುಮಾರ್ ಅವರ ಮದುವೆ ಇದೇ ಮೇ 25, 26 ರಂದು ಭರ್ಜರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಸಿನಿಮಾ ದಿಗ್ಗಜರೆಲ್ಲಾ ಸೇರಿ ತಾರಾ ಸಂಭ್ರಮವೇ ಮನೆ ಮಾಡಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here