ಇದೇ ತಿಂಗಳ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ ಇದ್ದು ಈ ಬಾರಿ ಪುನೀತ್ ರಾಜಕುಮಾರ್ ಅವರು ತಮ್ಮ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ನೀವು ಸುರಕ್ಷಿತ ವಾಗಿದ್ದರೆ ಅದೇ ನನಗೆ ಸಿಗುವ ದೊಡ್ಡ ಉಡುಗೊರೆ ದಯವಿಟ್ಟು ಯಾರೂ ದೂರದ ಊರುಗಳಿಂದ ಮನೆಯ ಬಳಿ ಬರಬೇಡಿ ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ ಜಗತ್ತಿನಾದ್ಯಂತ ಹರಡಿರುವ ಕೊರೋನಾ ವೈರಸ್  ಹಿನ್ನೆಲೆಯಲ್ಲಿ ಯಾರೂನೂ ಮನೆಯ ಬಳಿ ಬರುವ ಸಾಹಸ ಮಾಡಬೇಡಿ ಯಾರಿಗೂ ತೊಂದರೆ ಆಗುವುದು ನನಗೆ ಇಷ್ಟವಿಲ್ಲ.

ಹೀಗಾಗಿ ನೀವು ಇದ್ದ ಜಾಗದಿಂದಲೇ ನನಗೆ ಶುಭ ಹಾರೈಸಿ ಎಂದು ಪುನೀತ್ ರಾಜಕುಮಾರ್ ಅವರು  ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳಿಗೆ ನಾವೆಲ್ಲ ಸಹಕಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ ನೀವೆಲ್ಲರೂ ಪ್ರತಿವರ್ಷ ದೂರದ ಊರುಗಳಿಂದ ಬಂದು ನನಗೆ ಶುಭಹಾರೈಸಿದ್ದೀರಿ, ಈ  ಪ್ರೀತಿ ವಿಶ್ವಾಸ ಸದಾ ಕಾಲ ಹಾಗೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಯಾರೂ ಸಹ ದೂರದ ಊರುಗಳಿಂದ ಮನೆಯ ಬಳಿ ಬರಬೇಡಿ ನಾನು ಮನೆಯಲ್ಲಿ ಇರುವುದಿಲ್ಲ ಎಂದು ಪುನೀತ್ ರಾಜಕುಮಾರ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಜಗತ್ತಿನಾದ್ಯಂತ ಹರಡಿರುವ ಕೋರೋನ  ವೈರಸ್ ತಡೆಯಲು ಕರ್ನಾಟಕ ಸರ್ಕಾರ ಸಹ ಒಂದು ವಾರಗಳ ಕಾಲ ಎಲ್ಲಾ ಮನರಂಜನಾ ಕಾರ್ಯಕ್ರಮಗಳು ಸೇರಿದಂತೆ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ತಡೆಹಿಡಿಯುವಂತೆ ಆದೇಶ ನೀಡಿದೆ. ಹೀಗಾಗಿ ಪುನೀತ್ ರಾಜಕುಮಾರ್ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ ಆದ ಕಾರಣದಿಂದ ದೂರದ ಊರಿನಿಂದ ಬರುವ ಅಭಿಮಾನಿಗಳಿಗೆ ಪುನೀತ್ ರಾಜಕುಮಾರ್ ವಿಡಿಯೋ ಮೂಲಕ ತಮ್ಮ ಮನವಿ ಮಾಡಿಕೊಂಡಿದ್ದಾರೆ.

ನೀವು ಮುನ್ನೆಚ್ಚರಿಕಿ ವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ 🙏

Puneeth Rajkumar यांनी वर पोस्ट केले शुक्रवार, १३ मार्च, २०२०

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here