ಮಾರ್ಚ್ 17 ಎಂದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ಇದು ಸಂಭ್ರಮದ ದಿನ. ಏಕೆಂದರೆ ಅವರ ಅಭಿಮಾನದ  ನಟನ ಜನ್ಮದಿನ ಇದು. ಪುನೀತ್ ರಾಜ್‍ಕುಮಾರ್ ಅವರು ಸ್ಯಾಂಡಲ್ ವುಡ್ ಸ್ಟಾರ್ ನಟ ಎಂಬುದು ನಾಡಿಗೆ ಮಾತ್ರವಲ್ಲದೇ ಭಾರತೀಯ ಚಿತ್ರರಂಗಕ್ಕೆ ತಿಳಿದ ವಿಷಯ. ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಮಗನಾಗಿ ಬಾಲನಟನಾಗಿ ಚಿತ್ರರಂಗಕ್ಕೆ ಅಡಿ ಇರಿಸಿದ ಪುನೀತ್  ಇಂದು ತನ್ನದೇ ಆದ ಸ್ಟಾರ್ ಡಂ ಹೊಂದಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಸ್ಥಾನವನ್ನು ಪಡೆದಿರುವುದು ಅವರ ನಟನಾ ಸಾಮರ್ಥ್ಯಕ್ಕೆ ಮತ್ತು ಶ್ರೇಷ್ಠ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಪುನೀತ್ ರಾಜ್‍ಕುಮಾರ್ ಅವರು ಇಂದು ಒಬ್ಬ ನಟನಾಗಿ ಮಾತ್ರ ಉಳಿದಿಲ್ಲ. ಅವರೊಬ್ಬ ನಿರ್ಮಾಪಕ ಕೂಡಾ ಅದಕ್ಕಿಂತ ಮುಖ್ಯವಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅವರು ತಾವು ಮಾಡುವ ಸೇವಾ ಕಾರ್ಯಗಳ ಬಗ್ಗೆ ಹೆಚ್ಚು ಪ್ರಚಾರವನ್ನು ಎಂದೂ ಬಯಸಿದವರಲ್ಲ. ನಾಡಿನ ಉದ್ದದಲ್ಲಿ ಕೂಡಾ ಅವರ ಅಭಿಮಾನಿಗಳು ಅವರನ್ನು ಸ್ಪೂರ್ತಿ ಎಂದೇ ಭಾವಿಸುತ್ತಾರೆ. ಪ್ರತಿವರ್ಷ ಅವರ ಜನ್ಮದಿನ ಎಂದರೆ ಅಭಿಮಾನಿಗಳಿಗೆ ಅದು ಒಂದು ಸಂಭ್ರಮ. ಚಿತ್ರರಂಗಕ್ಕೆ ಬಂದು ಯಶಸ್ವಿ 44 ವರ್ಷಗಳನ್ನು ಮುಗಿಸಿದ್ದರೂ ಇಂದೂ ಅವರ ಚಾರ್ಮ್ ಮತ್ತು ಫ್ಯಾನ್ ಫಾಲೋಯಿಂಗ್ ಮಾತ್ರ ಕಡಿಮೆಯಾಗಿಲ್ಲ. ಒಂದರ್ಥದಲ್ಲಿ ಅದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಈ ಬಾರಿ ಕೊರೊನಾ ಭೀತಿಯಿಂದ ಪುನೀತ್ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ, ಮನೆಯ ಬಳಿ ಯಾರೂ ಬರಬೇಡಿ, ಸರ್ಕಾರದ ಆದೇಶವನ್ನು ಗೌರವಿಸಬೇಕೆಂದು, ‘ನೀವು ತೋರಿಸುವ ಪ್ರೀತಿ ವಿಶ್ವಾಸ ಯಾವಾಗಲೂ ನನ್ನ ಮೇಲೆ ಇರುತ್ತದೆ ಎಂಬ ನಾನು ಭಾವಿಸಿದ್ದೇನೆ. ನೀವೆಲ್ಲರೂ ಹುಷಾರಾಗಿರಿ’ ನಿಮ್ಮ ಸುರಕ್ಷತೆಯೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ’ ಎನ್ನುವ ಮೂಲಕ ಅಭಿಮಾನಿಗಳ ಆರೋಗ್ಯದ ಬಗ್ಗೆ ಅಪ್ಪು ಕಾಳಜಿ ತೋರಿಸುತ್ತಾ ಮಾತನಾಡಿದ್ದರು. ಆದ್ದರಿಂದ ಈ ಬಾರಿ ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅಭಿಮಾನಿಗಳು ಈಗಾಗಲೇ ತಮ್ಮ ನೆಚ್ಚಿನ ನಟನಿಗೆ ಜನ್ಮ ದಿನದ ಶುಭಾಶಯನ್ನು ತಿಳಿಸುತ್ತಿದ್ದಾರೆ.‌ಸರಳತೆ, ಸಮಾಜದ ಕಳಕಳಿ, ನಗುಮೊಗ ಮೈಗೂಡಿಸಿಕೊಂಡ ರಾಜಕುಮಾರನಿಗೆ ಸುದ್ದಿಮನೆ ತಂಡದಿಂದ  ಜನ್ಮದಿನದ ಶುಭಾಶಯಗಳು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here