ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 43ನೇ ವಸಂತಕ್ಕೆ ಕಾಲಿಟ್ಟರು. ನಿರೀಕ್ಷೆಗೂ ಮೀರಿ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಮನೆ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಇದೇ ವೇಳೆ ಚಿತ್ರರಂಗದ ಹೆಸರಾಂತ ನಟ ನಟಿಯರು , ತಂತ್ರಜ್ಞರು ಅಪ್ಪುಗೆ ಶುಭಾಶಯ ತಿಳಿಸಿದ್ದು ವಿಶೇಷ.
ಡಾ.ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ,ವಿನಯ್ ರಾಜಕುಮಾರ್ ,ಗುರುರಾಜಕುಮಾರ್ ಜೈ ಜಗದೀಶ್ ಕುಟುಂಬ, ನಿರ್ದೇಶಕ ಆನಂದರಾಮ್, ಯೋಗಿ ಜಿ ರಾಜ್, ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಪುನೀತ್ ಅಭಿಮಾನಿ ರಾಣಿಬೆನ್ನೂರಿನ ಸಿದ್ದು ಎಂಬುವವರು ಮೈಮೇಲೆ ಪುನೀತ್ ರಾಜ್‍ಕುಮಾರ್ ಅವರ ನಟಸಾರ್ವಭೌಮ ಚಿತ್ರದ ಲುಕ್ ಪೈಂಟಿಂಗ್ ಮಾಡಿ ಎಲ್ಲರ ಗಮನ ಸೆಳೆದರು
ಇದೇ ವೇಳೆ ಒಳ್ಳೆಯ ಹುಡುಗ ಪ್ರಥಮ್ ಪುನೀತ್ ಜನ್ಮದಿನಕ್ಕೆ ಚಿನ್ನದ ಲೇಪಿತ ತಿರುಪತಿ ತಿಮ್ಮಪ್ಪನ ವಿಗ್ರಹ ಕಾಣಿಕೆ ನೀಡಿ ಗಮನಸೆಳೆದರು,ಕಳೆದ ಬಾರಿ ದುಬಾರಿ ಉಂಗುರ ಹಾಕಿದ್ದ ಪ್ರಥಮ್ ಈ ವರ್ಷವೂ ದುಬಾರಿ ಉಡುಗೊರೆ ನೀಡಿ ಪುನೀತ್ ರಾಜ್‍ಕುಮಾರ್ ಮೇಲಿನ ತನ್ನ ಅಭಿಮಾನ ಮೆರೆದರು. ಎಂದಿನಂತೆ ಅಣ್ಣಾವ್ರ ಸಮಾಧಿಗೆ ತೆರಳಿ ತಂದೆಯ ಆಶೀರ್ವಾದ ಪಡೆದ ಪುನೀತ್ ರಾಜ್‍ಕುಮಾರ್ ಅವರನ್ನು ಡಾ.ರಾಜ್ ಸ್ಮಾರಕದ ಬಳಿ ಹಲವಾರು ಅಭಿಮಾನಿಗಳು ಆವರಿಸಿಕೊಂಡರು , ಮನೆಯ ಬಳಿ ಅಭಿಮಾನಿಗಳ ನಿಯಂತ್ರಿಸಲು ಪೋಲಿಸರು ಲಾಠಿ ಬೀಸಬೇಕಾಯಿತು.
ಇನ್ನು ಬೆಳಿಗ್ಗೆಯಿಂದ ದೊಡ್ಡ ದೊಡ್ಡ ಹಾಗೂ ಕಲರ್ ಕೇಕುಗಳ ರಾಶಿಯೇ ಪುನೀತ್ ಗಾಗಿ ಕಾದಿತ್ತು.ಪುನೀತ್ ರಾಜಕುಮಾರ್ ಅವರ ನಟಸಾರ್ವಭೌಮ ಚಿತ್ರದ ಹೆಸರಿನ , ಪಿ. ಆರ್.ಕೆ ಹೆಸರಿನ , ಪವರ್ ಸ್ಟಾರ್ ನಾಮದ ಹಲವು ಬಗೆಬಗೆಯ ದೊಡ್ಡ ದುಬಾರಿ ಕೇಕುಗಳು ಪುನೀತ್ ರಾಜ್‍ಕುಮಾರ್ ಜನ್ಮದಿನಕ್ಕೆ ಮೆರುಗು ತಂದವು‌.
ಅಭಿಮಾನಿಯೊಬ್ಬರು ಪುನೀತ್ ರಾಜ್‍ಕುಮಾರ್ ಅವರಿಗೆ ಹೋವರ್ ಬೋರ್ಡ್ ನೀಡಿದ್ದು ವಿಶೇಷವಾಗಿತ್ತು ಇದನ್ನು ಗಮನಿಸಿದ ಪುನೀತ್ ನನಗೆ ಈ ತರಹದ ದುಬಾರಿ ಉಡುಗೊರೆಗಳನ್ನು ಯಾಕೆ ತರುತ್ತೀರಿ ನಿಮ್ಮ ಅಭಿಮಾನ ಹಾರೈಕೆಯೇ ಸಾಕು ಎಂದು ಹೇಳಿದರು.
ಕನ್ನಡ ಚಿತ್ರರಂಗದ ಸೋಲಿಲ್ಲದ ಸರದಾರ, ಸರಳತೆಯ ಸಾಮ್ರಾಟ್ ಕನ್ನಡದ ರಾಜರತ್ನ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ರಾಜರತ್ನೋತ್ಸವ ಸಂಭ್ರಮ ಎಲ್ಲಡೆ ಹಬ್ಬದ ಸಡಗರ ಉಂಟು ಮಾಡಿ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಪೋಲೀಸ್ ಸಿಬ್ಬಂದಿಯೂ ಕೂಡ ಪುನೀತ್ ರಾಜ್‍ಕುಮಾರ್ ಅವರ ಜನುಮನದ ಸಂಭ್ರಮ ಆಚರಿಸಿ ಪುನೀತ್ ಮೇಲಿನ ತಮ್ಮ ಅಭಿಮಾನ ತೋರಿಸಿದ್ದು ವಿಶೇಷವಾಗಿತ್ತು.ನಮ್ಮ ಸುದ್ದಿಮನೆಯಿಂದ ಪುನೀತ್ ರಾಜ್‍ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here