ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರಿಗಾಲಲ್ಲಿ ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಹತ್ತಿದ್ದು, ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ. ದೇವಾಸ್ಥಾನಕ್ಕೆ ಪುನೀತ್ ನ ದಿಢೀರ್ ಭೇಟಿ ಕಂಡು ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಬೆಟ್ಟ ಹತ್ತಿ ಇಳಿಯುವವರೆಗೂ ಜೊತೆಯಲ್ಲಿ ಸಾಥ್ ನೀಡಿದ್ದಾರೆ.


ಕನ್ನಡದ ಜನಪ್ರಿಯ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಸರಳತೆಯಿಂದಲೇ ಸಾಕಷ್ಟು ಸಲ ಸುದ್ದಿಯಲ್ಲಿದ್ದಾರೆ.ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಪುನೀತ್ ರಾಜ್‍ಕುಮಾರ್ ಅವರು ನಿಜ ಜೀವನದಲ್ಲಿ ಅತ್ಯಂತ ಸರಳವಾಗಿ ಇರುತ್ತಾರೆ.ತಂದೆ ತಾಯಿಗೆ ಅತಿ ಹೆಚ್ಚಾಗಿ ಗೌರವಿಸುವ ಪುನೀತ್ ರಾಜ್‍ಕುಮಾರ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರಿಗೆ ಅಪಾರ ಧೈವ ಭಕ್ತಿ ಇದೆ.ಪುನೀತ್ ರಾಜ್‍ಕುಮಾರ್ ಅವರಿಗೆ ಚಿಕ್ಕಂದಿನಿಂದಲೂ ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡುವ ಹವ್ಯಾಸ ಇದೆ.ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಯ ದರ್ಶನ ಪಡೆಯುವ ಪುನೀತ್ ರಾಜ್‍ಕುಮಾರ್ ಚಾಮುಂಡೇಶ್ವರಿ ದೇವಿಯನ್ನು ಹೆಚ್ಚಾಗಿ ನಂಬಿದ್ದಾರೆ.

ಯಾವಾಗಲೂ ಪುನೀತ್ ರಾಜ್‍ಕುಮಾರ್ ಅವರು ಚಾಮುಂಡಿ ಬೆಟ್ಟವನ್ನು ಬರೀ ಕಾಲಲ್ಲೇ ಹತ್ತುತ್ತಾರೆ.ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಬರಿ ಕಾಲಿನಲ್ಲೇ ಹತ್ತಿ ಚಾಮುಂಡಿ ದೇವಿಯ ದರ್ಶನ ಪಡೆಯುತ್ತಾರೆ ಪುನೀತ್ ರಾಜ್‍ಕುಮಾರ್. ಈ ಬಾರಿಯೂ ಪುನೀತ್ ರಾಜ್‍ಕುಮಾರ್ ಅವರು ಸಾಮಾನ್ಯರಂತೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟವನ್ನು ಹತ್ತಿರುವ ಫೋಟೋಗಳು ಈಗ ವೈರಲ್ ಆಗಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here