ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿ.  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಪಡೆದು ಟಿ ಆರ್ಪಿ ಯಲ್ಲಿ  ಅಗ್ರಸ್ಥಾನ ಕಾಯ್ದುಕೊಂಡಿದೆ. ಪ್ರತಿ ಶನಿವಾರ-ಭಾನುವಾರ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸುತ್ತಾರೆ. ಹೀಗೆ ಸ್ಪರ್ಧಿಗಳು ಭಾಗವಹಿಸುವಾಗ ಪುನೀತ್ ರಾಜಕುಮಾರ್ ಅವರಿಗೆ ಕೆಲವು ವಿಷಯಗಳನ್ನು ವಿಚಾರಗಳನ್ನು ಕೇಳುತ್ತಿರುತ್ತಾರೆ.

ಪುನೀತ್ ರಾಜಕುಮಾರ್ ಅವರ ಅಚ್ಚುಮೆಚ್ಚಿನ ನಟ,  ಕ್ರಿಕೆಟ್ ಪಟು ಹಾಗೂ ಇನ್ನಿತರ ಪುನೀತ್ ಮೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಸ್ಪರ್ಧಿಗಳು ಕಾತುರರಾಗಿರುತ್ತಾರೆ.. ನಿನ್ನೆಯ ಕಾರ್ಯಕ್ರಮದಲ್ಲಿ ಪಾವಗಡದ ಮನು ಪುನೀತ್ ರಾಜಕುಮಾರ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಅದೇನೆಂದರೆ ಪುನೀತ್ ರಾಜಕುಮಾರ್ ಅವರ ನೆಚ್ಚಿನ ಕ್ರೀಡಾಪಟು ಅಥವಾ ಕ್ರಿಕೆಟ್ ಪಟು ಯಾರು ಎಂದು ಅವರು ಪುನೀತ್ ಅವರಿಗೆ ಕೇಳಿದಾಗ ಪುನೀತ ರಾಜಕುಮಾರ ಅವರು

ಕೊಟ್ಟ ಉತ್ತರ ಸಚಿನ್ ತೆಂಡೂಲ್ಕರ್. ಯಾವಾಗಲೂ ನನ್ನ ಅಚ್ಚುಮೆಚ್ಚಿನ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಎಂದು ಪುನೀತ್ ರಾಜಕುಮಾರ್ ಅವರು ಹೇಳುವ ಮೂಲಕ ತಮ್ಮ ನೆಚ್ಚಿನ ಕ್ರಿಕೆಟ್ ಪಟುವಿನ ಹೆಸರನ್ನು ಬಹಿರಂಗಪಡಿಸಿದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಆಡಿದ ಪಾವಗಡದ ಮನು ಬ್ಯಾಂಕ್ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ 640000 ಸಾವಿರಾರು ಹಣವನ್ನು ಗೆದ್ದು ಆಟ ನಿರ್ಗಮಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here