ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ನಿಲ್ಲದ ಮಳೆ, ತುಂಬಿ ಹರಿಯುತ್ತಿರುವ ನದಿಗಳು ಉಂಟು ಮಾಡಿರುವ ಭೀಕರತೆಯಿಂದ ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ರಕ್ಷಣಾ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ದುಡಿದು ತಿನ್ನುವ ಜನರು ಇಂದು ಸಹಾಯಕ್ಕಾಗಿ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ಪ್ರಕೃತಿಯ ಈ ಭೀಕರ ಪರಿಣಾಮಕ್ಕೆ ಜನರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಜನರ ನೆರವಿಗೆ ಮುಂದಾಗಬೇಕಾಗಿರುವುದು ರಾಜ್ಯದ ಎಲ್ಲ ಜನರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸೆಲೆಬ್ರಿಟಿ ಗಳು ತಮ್ಮ ಕೈಲಾದ ಸಹಾಯವನ್ನು ನೀಡಲು ಮುಂದಾಗಿದ್ದಾರೆ.

ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕೂಡಾ ಈಗ ಜನರಿಗೆ ಅಂತಹುದೊಂದು ಸಂದೇಶವನ್ನು ನೀಡಿದ್ದಾರೆ. ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಅಲ್ಲಿನ ಪರಿಸ್ಥಿತಿ ಕ್ಲಿಷ್ಟವಾಗಿದೆ. ಈ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ಅಲ್ಲಿನ ಜನರಿಗೆ ಸ್ಪಂದಿಸಬೇಕಾಗ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ಪುನೀರ್ ಅವರು ತಮ್ಮ ಸಂಸ್ಥೆಯ ಮೂಲಕ ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ನೀಡುತ್ತಾ ಇರುವುದಾಗಿ ಹೇಳಿದ್ದು, ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ತಮ್ಮ ಹತ್ತಿರ ಇರುವ ಸೇವಾ ಕೇಂದ್ರಗಳಿಗೆ ಹೋಗಿ ನಿಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ನಿನ್ನೆ ಶಿವಣ್ಣ ಅವರು ಕೂಡಾ ಜನರಲ್ಲಿ ಇಂತಹುದೊಂದು ವಿಚಾರವನ್ನು ಹಂಚಿಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ರಾಜ್ಯಾಧ್ಯಂತ ಪ್ರಮುಖವಾಗಿ ಉತ್ತರಕರ್ನಾಟಕದ ಪ್ರವಾಹಕ್ಕೆ ನಾವೆಲ್ಲರೂ ನಮ್ಮ ಶಕ್ತಿಮೀರಿ ಸಹಾಯಮಾಡಬೇಕೆಂದು ನಾನು ಕೋರಿಕೊಳ್ಳುತ್ತೇನೆ….. ವರುಣನ ಆರ್ಭಟ ನಿಲ್ಲಲೆಂದು ಪ್ರಾರ್ಥಿಸೋಣ…. #karnatakafloods

Puneeth Rajkumar यांनी वर पोस्ट केले गुरुवार, ८ ऑगस्ट, २०१९

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here