ಕೇರಳ ಮತ್ತು ಕೊಡಗು ಎರಡೂ ಮಳೆಯಿಂದ ಎದುರಿಸುತ್ತಿರುವ ಭೀಕರ ಪರಿಣಾಮವನ್ನು ಇಡೀ ರಾಷ್ಟ್ರವೇ ಗಮನಿಸುತ್ತಿದ್ದು, ಎಲ್ಲರೂ ಇಲ್ಲಿನ‌ ಪರಿಸ್ಥಿತಿಯನ್ನು ಕಂಡು ಮರುಗಿದ್ದಾರೆ. ಕೊಡಗಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಳೆ ಗುಡ್ಡ ಕುಸಿತ ಈಗ ಕೊಡಗಿನ ಜನರನ್ನ ಆತಂಕಕ್ಕೆ ಸಿಲುಕುವಂತೆ ಮಾಡಿದೆ ಆ ಜನರ ಜೀವನ ದುರ್ಬರವಾಗಿರುವುದನ್ನು ಕಂಡು ಆತಂಕ ಪಟ್ಟಿದ್ದಾರೆ. ರಾಷ್ಟ್ರದ ನಾಯಕರೆಲ್ಲಾ ಕೇರಳ ಹಾಗೂ ಕೊಡಗಿನ ಪರಿಸ್ಥಿತಿ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಾ‌ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ತಮ್ಮ ಸಹಾಯ ಹಾಗೂ ಸಹಕಾರವನ್ನು ನೀಡುತ್ತಿದ್ದಾರೆ. ಪಕ್ಷ ರಾಜಕೀಯವನ್ನು ಪಕ್ಕಕ್ಕಿಟ್ಟು ಜನರ ರಕ್ಷಣೆಗೆ ಎಲ್ಲರೂ ಗಮನ ನೀಡಿದ್ದಾರೆ.

ಕರ್ನಾಟಕದ ಕೊಡಗು ಮತ್ತು ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಉದ್ಯಮಿಗಳಿಂದ ಹಿಡಿದು, ಸಿನಿಮಾ ನಟರು ತಮ್ಮ ಕೈಲಾದ ಮಟ್ಟಿಗೆ ಪರಿಹಾರ ರೂಪದಲ್ಲಿ ಹಣ ನೀಡುತ್ತಿದ್ದಾರೆ. ಹಾಗೆ ಕೊಟ್ಟ ಮೊತ್ತದ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅದು ದೊಡ್ಡಸ್ತಿಕೆ ತೋರಿಸಿಕೊಳ್ಳುವುದಕ್ಕಲ್ಲ. ಅದನ್ನು ನೋಡಿ ಮತ್ತೊಬ್ಬರು ಹಣ ನೀಡಲು ಮುಂದೆ ಬರಲಿ ಎಂಬುದಕ್ಕೆ. ಆ ರೀತಿಯ ದೊಡ್ಡ ಮಟ್ಟದ ಸೆಲೆಬ್ರಿಟಿ ಅಭಿಯಾನ ಕರ್ನಾಟಕದಲ್ಲೂ ಶುರುವಾಗಿದೆ. ಅದು ಕೊಡಗು ಉಳಿವಿಗಾಗಿ! ಹೌದು, ಅತಿಯಾದ ಮಳೆಯಿಂದ ಕೇರಳ ರಾಜ್ಯದ ಕೆಲವೆಡೆ ಉಂಟಾದ ನೆರೆ ಪರಿಸ್ಥಿತಿ ಕೊಡಗು ಜಿಲ್ಲೆಯಲ್ಲೂ ತಲೆದೂರಿದೆ. ತಗ್ಗು ಪ್ರದೇಶವೆಲ್ಲ ಜಲಾವೃತವಾಗಿ, ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುವಂತಾಗಿದೆ.

ಕೇರಳ ರಾಜ್ಯದ ಸಂತ್ರಸ್ತರಿಗೆ ಐದು ಲಕ್ಷ ರೂ‌ ನೀಡಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇದೀಗ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಮೃತ ಪಟ್ಟವರ ಕುಟುಂಬದ ಸಹಾಯಕ್ಕಾಗಿ ಒಂದೊಂದು ಲಕ್ಷ ಪರಿಹಾರ ನೀಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಕನ್ನಡ ಚಿತ್ರರಂಗದ ಸ್ಟಾರ್ ನಟರ ಎಲ್ಲಾ ಅಭಿಮಾನಿಗಳು‌ ಸ್ವಯಂಪ್ರೇರಣೆಯಿಂದ ಕೊಡಗಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅತೀವ ಮಳೆ ಗುಡ್ಡ ಕುಸಿತಗಳಿಂದ ವಸತಿಗಳನ್ನು ಕಳೆದುಕೊಂಡಿರುವ ಕೊಡಗಿನ ಜನತೆಗೆ ಈಗ  ಕರ್ನಾಟಕ ರಾಜ್ಯದ ಜನರ ಆರ್ಥಿಕ ನೆರವಿನ ಅಗತ್ಯವಿದೆ. ಆದರೆ ಕೊಡಗಿನ ಜನರಿಗಾಗಿ ಎಲ್ಲರೂ ಸಹಾಯಕ್ಕೆ ಮುಂದಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here