ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ. ಈ ಶೋ ಕೇವಲ‌ ಮನರಂಜನೆಯ ಕಾರ್ಯಕ್ರಮವಲ್ಲ, ಮನರಂಜನೆಯ ಜೊತೆ ಜೊತೆಗೆ ಜ್ಞಾನಾರ್ಜನೆ ಹಾಗೂ ಅನೇಕ ಉತ್ತಮ ವಿಚಾರಗಳ ವಿನಿಮಯ ಕೂಡಾ ಇಲ್ಲಿ ನಡೆಯುತ್ತದೆ. ಅಂತಹುದೇ ಒಂದು ಅಪರೂಪದ ಘಟನೆ ಹಾಗೂ ಆತ್ಮೀಯತೆಯ ಸನ್ನಿವೇಶ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಡೆದಿದೆ. ಪುನೀತ್ ರಾಜ್ ಕುಮಾರ್ ಅವರ ಪುನಾರಾಗಮನದೊಂದಿಗೆ ಆರಂಭವಾದ ಈ ಸೀಸನ್ ಈಗಾಗಲೇ ಬಹಳಷ್ಟು ಜನಪ್ರಿಯವಾಗಿದೆ.

ಕಾರ್ಯಕ್ರಮಕ್ಕೆ ಬಂದಿದ್ದ ಹಾಟ್ ಸೀಟ್ ನಲ್ಲಿ ಕುಳಿತ ಮಹಿಳಾ ಸ್ಪರ್ಧಿಯೊಬ್ಬರು ಶಾಲಾ ಶಿಕ್ಷಕಿಯಾಗಿದ್ದು ಅವರು ಅಪ್ಪು ಅವರ ಜೊತೆ ಮಾತನಾಡುತ್ತಾ ಶಿಕ್ಷಕರ ಬಗ್ಗೆ, ಸರ್ಕಾರಿ ಶಾಲೆಗಳ ಬಗ್ಗೆ ಹೊಗಳಿಕೆಯ ನುಡಿಗಳನ್ನಾಡಿದಾಗ, ಪುನೀತ್ ಅವರು ಕೂಡಾ ಸರ್ಕಾರಿ ಶಾಲೆಗಳ ಮಹತ್ವವನ್ನು ಹೇಳಿದರು. ಅಲ್ಲದೆ ಆ ಶಿಕ್ಷಕಿಯು ತಮ್ಮ ತಾಯಿ ಅಣ್ಣಾವ್ರ ಅಭಿಮಾನಿಯೆಂದು, ಆದರೆ ಆಕೆ ಅವರನ್ನು ಭೇಟಿ ಮಾಡಲಾಗಲಿಲ್ಲ ಎನ್ನುತ್ತಾ, ತಾನು ಅದೃಷ್ಟವಂತೆ ಅದಕ್ಕೆ ಪುನೀತ್ ಅವರನ್ನು ಹಾಗೂ ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಭೇಟಿಯಾಗಿದ್ದೇನೆ. ಶಿವಣ್ಣನವರನ್ನು ಭೇಟಿ ಮಾಡೋಕೆ ಇನ್ನೂ ಆಗಿಲ್ಲ , ಆದರೆ ಖಂಡಿತ ಭೇಟಿ ಮಾಡ್ತೇನೆ ಎಂದು ಅಭಿಮಾನದಿಂದ ನುಡಿದರು.

ಶಿಕ್ಷಕಿ ತಮ್ಮ ಎಳೆಯ ಮಗುವನ್ನು ಕೂಡಾ ಕಾರ್ಯಕ್ರಮಕ್ಕೆ ಕರೆ ತಂದಿದ್ದರು. ಅವರು ಮಗುವಿಗೆ ಪುನೀತ್ ರಾಜ್‍ಕುಮಾರ್ ಅವರು ಹೆಸರಿಡಬೇಕೆಂದು ಕೇಳಿದರು‌. ಅವರ ಅಭಿಮಾನವನ್ನು ಮೆಚ್ಚಿದ ಪುನೀತ್ ಅವರು ಎಳೆಯ ಮಗುವಿಗೆ ಶೌರಿ ಎಂದು ಕಾರ್ಯಕ್ರಮದ ವೇದಿಕೆಯ ಮೇಲೆ, ಶಿಕ್ಷಕಿ ಹಾಗೂ ಅವರ ಕುಟುಂಬ ಹಾಗೂ ನೆರೆದಿದ್ದ ಪ್ರೇಕ್ಷಕರ ಮುಂದೆ ನಾಮಕರಣ ಮಾಡಿದರು‌. ಈ ದೃಶ್ಯ ಬಹಳ ಅಪರೂಪ ಹಾಗೂ ಅಭಿಮಾನಿಗಳ ಅಭಿಮಾನದ ಒಂದು ಉತ್ತಮ ಉದಾಹರಣೆ ಎನ್ನುವಂತೆ ಕಂಡಿದೆ.

ಅಪ್ಪು ಸರ್ ಹೆಸರಿಟ್ರು ಅಂದ್ಮೇಲೆ ಈ ಪುಟಾಣಿ ಕೂಡ ಸೆಲೆಬ್ರಿಟಿನೇ!ಕನ್ನಡದ ಕೋಟ್ಯಧಿಪತಿ | ಶನಿ – ಭಾನು, ರಾತ್ರಿ 8:00ಕ್ಕೆ#KKP #ColorsKannada Puneeth Rajkumar

Colors Kannada यांनी वर पोस्ट केले सोमवार, १५ जुलै, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here