ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಬಾಕ್ಸಾಫೀಸ್ ನಲ್ಲಿ‌ ಸಾಕಷ್ಟು ಸದ್ದು ಮಾಡಿದ ಸಿನಿಮಾ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು”.ಕಿರಿಕ್ ಪಾರ್ಟಿ ಯಂತಹ ಕಮರ್ಷಿಯಲ್ ಸಿನಿಮಾ ಮಾಡಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ರಿಷಭ್ ಶೆಟ್ಟಿ ಅವರ ಕನಸಿನ ಚಿತ್ರವೇ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಿನಿಮಾ ಮಾಡಿ ಇಷ್ಟು ದೊಡ್ಡ ಗೆಲುವು ಗಳಿಸುವುದು ಸಾಧಾರಣ ವಿಷಯವಲ್ಲ. ಅಂತಹ ಅಸಾಧಾರಣ ಗೆಲುವುನ್ನು ಈ ಸಿನಿಮಾ ಕಂಡಿದೆ ಎನ್ನಬಹುದು.ಸಂಪೂರ್ಣವಾಗಿ ಕಾಸರಗೋಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರಿತವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ರಿಷಭ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾ ನೋಡಿದ ಪ್ರತಿಯೊಬ್ಬರೂ ವಾವ್ ಎಂದಿದ್ದರು.ಅಷ್ಟರ ಮಟ್ಟಿಗೆ ಸರ್ಕಾರ ಕನ್ನಡ ಶಾಲೆಯೊಂದರ ಉಳಿವಿಗಾಗಿ ನಡೆಯು ಹೋರಾಟದ ಚಿತ್ರಣವನ್ನು ಅಚ್ಚುಕಟ್ಟಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ರಿಷಭ್ ಶೆಟ್ಟಿ ತೋರಿಸಿದ್ದರು.ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಹೇಂದ್ರ ಸೇರಿದಂತೆ ಹಲವಾರು ಮಕ್ಕಳ ನೈಜ ಅಭಿನಯ ಮತ್ತು ಅನಂತನಾಗ್ ಅವರ ಅದ್ಭುತ ಅಭಿನಯಕ್ಕೆ ಎಲ್ಲರೂ ಮನಸೋತಿದ್ದರು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾವನ್ನು ಸಾಕಷ್ಟು ಸ್ಟಾರ್ ಗಳು‌‌‌ ಮೆಚ್ವಿಕೊಂಡಿದ್ದರು.

ಕಳೆದ ಎರಡು ವಾರದ ಹಿಂದೆ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ ಸಾಕಷ್ಟು ಖುಷಿಪಟ್ಟಿದ್ದರು.ಅಷ್ಟೇ ಅಲ್ಲದೇ ಸಿನಿಮಾ ನೋಡಿದ ನಂತರ ಕನ್ನಡಿಗರು ದಯವಿಟ್ಟು ಮಿಸ್ ಮಾಡದೇ ಈ ಸಿನಿಮಾ ನೋಡಿ ಎಂದು ಮನವಿ ಸಹ ಮಾಡಿದ್ದರು.ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರತಂಡವನ್ನು ತಮ್ಮ ಮನೆಗೆ ಆಮಂತ್ರಿಸಿ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.ಅಷ್ಟೇ ಅಲ್ಲದೇ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ಅಭಿನಯಿಸಿದ್ದ ಮಕ್ಕಳು

ಹಾಗೂ ತಾಂತ್ರಿಕ ವರ್ಗ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರ ಜೊತೆ ಮಾತನಾಡಿ ಅಭಿನಂದನೆ ತಿಳಿಸಿ ನಂತರ ಎಲ್ಲರಿಗೂ ಉಪಚಾರ ನೀಡಿದ್ದಾರೆ.ಈ ಸಮಯದಲ್ಲಿ ಈ ಚಿತ್ರದಲ್ಲಿ ಅಭಿನಯಿಸಿದ್ದ ಮಕ್ಕಳು ಮತ್ತು ಕಲಾವಿದರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜೊತೆ ಫೋಟೋಸ್ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.ಇನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿವಾಸಕ್ಕೆ ತೆರಳಿ ಖುಷಿ ಪಟ್ಟ ವೀಡಿಯೋ ಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ನಿರ್ದೇಶಕ ರಾದ ರಿಷಭ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here