ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಕನ್ನಡದ ಏಕೈಕ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇದೀಗ ಹೊಸ ಚಾಲೆಂಜ್ ಒಂದನ್ನು ಹಾಕಿದ್ದು ಪುನೀತ್ ರಾಜ್‍ಕುಮಾರ್ ಅವರ ಈ‌ಹೊಸ ಚಾಲೆಂಜ್ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ‌. ಇಷ್ಟು ದಿನಗಳ ವರೆಗೆ ದೇಶಾದ್ಯಂತ ಸುದ್ದಿಯಲ್ಲಿದ್ದ ಫಿಟ್ನೆಸ್ ಚಾಲೆಂಜ್ ಸೆಲೆಬ್ರಿಟಿ ಗಳಿಂದ ಹಿಡಿದು ಸಾಮಾನ್ಯ ಪ್ರಜೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ಫಿಟ್ನೆಸ್ ಚಾಲೆಂಜ್ ಹಾಕುವಂತೆ ಮಾಡಿತ್ತು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ಅನೇಕ ರಾಜಕಾರಣಿಗಳು ಹಾಗೂ ಖ್ಯಾತ ಚಲನಚಿತ್ರ ನಟನಟಿಯರು ಈ ಫಿಟ್ನೆಸ್ ಚಾಲೆಂಜ್ ನಲ್ಲಿ ಮುಳುಗಿದ್ದರು.

ಕನ್ನಡ ಚಿತ್ರರಂಗದಲ್ಲೂ ಸಹ ಈ ಫಿಟ್ನೆಸ್ ಚಾಲೆಂಜ್ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಪುನೀತ್ ರಾಜ್‍ಕುಮಾರ್ ಸುದೀಪ್ ಯಶ್  ರಕ್ಷಿತ್ ಶೆಟ್ಟಿ ಶ್ರೀಮುರಳಿ ಸೇರಿದಂತೆ ಹಲವು ನಟರು ಪರಸ್ಪರ ಫಿಟ್ನೆಸ್ ಚಾಲೆಂಜ್ ಹಾಕುವ ಮೂಲಕ ಕೆಲವು ದಿನಗಳ ಕಾಲ ಫಿಟ್ನೆಸ್ ಚಾಲೆಂಜ್ ಸುದ್ದಿಯಲ್ಲಿರುವಂತೆ ಮಾಡಿದ್ದರು. ಇದೀಗ ಮತ್ತೆ ಹೊಸ ರೀತಿಯ ಚಾಲೆಂಜ್ ಗೆ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮುನ್ನುಡಿ ಬರೆದಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ತಮ್ಮ ಹೊಸ ಚಾಲೆಂಜ್ ಅನ್ನು ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ,ಡ್ಯಾನಿಶ್ , ಸಂತೋಷ್ ಆನಂದರಾಮ್ ಅವರಿಗೆ ಮೊದಲ ಸುತ್ತಿನಲ್ಲಿ ನೀಡಿದ್ದಾರೆ.

ಇಷ್ಟಕ್ಕೂ ಪುನೀತ್ ರಾಜ್‍ಕುಮಾರ್ ಅವರು ನೀಡಿರುವ ಹೊಸ ಚಾಲೆಂಜ್ ಯಾವುದು ಗೊತ್ತಾ ? ಅದೇ ಶೇಕ್ ಹ್ಯಾಂಡ್ ಚಾಲೆಂಜ್. ಹೌದು ಪರಸ್ಪರ ಸ್ನೇಹ ಬೆಸೆಯುವ ಸುಂದರ ಕಲ್ಪನೆಯೇ ಶೇಕ್ ಹ್ಯಾಂಡ್ ಚಾಲೆಂಜ್. ಪುನೀತ್ ರಾಜ್‍ಕುಮಾರ್ ಅವರು ನೀಡಿರುವ ಈ ಹೊಸ ಚಾಲೆಂಜ್ ಕನ್ನಡ ಚಿತ್ರರಂಗದ ಒಗ್ಗಟ್ಟಿನ ಮುನ್ನುಡಿ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತುವೆ. ಈ ಚಾಲೆಂಜ್ ಅನ್ನು ಚಿತ್ರರಂಗದ ಗೆಳೆಯರು  ಮುಂದಿನ ದಿನಗಳಲ್ಲಿ ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕಿದೆ‌.

Firm handshake Andre Confidence! Starting #handshakechallenge. Post a photo of you giving a confident hand shake to your friend. I challenge Rakshit Shetty, Santhosh Ananddram, Danish Sait…… Continue this confidence movement!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here