ಜಾಕಿ, ಅಣ್ಣಾ ಬಾಂಡ್, ದೊಡ್ಮನೆ ಹುಡುಗದಂತಹ ಅದ್ಬುತ ಚಿತ್ರಗಳನ್ನು ನೀಡಿದ ಜೋಡಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸೂರಿ. ಈಗ ಇವರಿಬ್ಬರು ಕಾಂಬಿನೇಷನ್ ನಲ್ಲಿ ಒಂದು ಹೊಸ ಚಿತ್ರ ಸೆಟ್ಟೇರಲಿದೆ ಎಂದರೆ, ಎಲ್ಲರ ಚಿತ್ತ ಆ ಕಡೆ ಹರಿಯುತ್ತದೆ. ಮುಹೂರ್ತದಿಂದಲೇ ಚಿತ್ರದ ಬಗ್ಗೆ ಸಿನಿ ರಸಿಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲ ಮನೆ ಮಾಡುತ್ತದೆ. ಈಗ ನಿಜವಾಗಿಯೂ ಅಂತಹುದೊಂದು ಕುತೂಹಲವನ್ನು ಕೆರಳಿಸಲು ಹೊರಟಿದ್ದಾರೆ ಚಿತ್ರ ನಿರ್ದೇಶಕ ಸೂರಿ. ಅವರ ಹೊಸ ಚಿತ್ರದ ನಾಯಕ ಮತ್ತಾರೂ ಅಲ್ಲ, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೇ.

ಹೀಗೊಂದು ಸುದ್ದಿ ಗಾಂಧಿ ನಗರದಲ್ಲಿ ಈಗಾಗಲೇ ಹರಡಿದ್ದು, ಸೂರಿ ಹಾಗೂ ಪುನೀತ್ ಅವರ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಸೆಟ್ಟೇರುವ ಬಹುತೇಕ ಸೂಚನೆಗಳು ಲಭ್ಯವಾಗಿವೆ. ಡಾ.ಶಿವರಾಜಕುಮಾರ್ ಅವರ ಜೊತೆ ಟಗರು ನಂತಹ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿದ ನಂತರ ಪ್ರಸ್ತುತ ನಿರ್ದೇಶಕ ಸೂರಿ ಅವರು ತಮ್ಮ ಬಹು ವಿಶೇಷ ಹೆಸರಿನಿಂದಲೇ ಜನರನ್ನು ಸೆಳೆಯುತ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ತೊಡಗಿಕೊಂಡಿದ್ದರೆ, ಇನ್ನೊಂದೆಡೆ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಬಹು ನಿರೀಕ್ಷಿತ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ತಮ್ಮ ಈ ಚಿತ್ರಗಳನ್ನು ಮುಗಿಸಿದ ನಂತರ , ಒಂದಾಗಿ ಹೊಸ ಸಿನಿಮಾವನ್ನು ಮಾಡಲಿದ್ದಾರೆ.

ವಿಶೇಷವೆಂದರೆ ಅದು ಪುನೀತ್ ರಾಜ್‍ಕುಮಾರ್ ಅವರ ಅಭಿನಯದ 30 ನೇ‌ ಚಿತ್ರವಾಗಿದೆ. ಆದ್ದರಿಂದಲೇ ನಿರೀಕ್ಷೆ ಕೂಡಾ ಭಾರೀ ಪ್ರಮಾಣದಲ್ಲಿದೆ. ನಿರ್ದೇಶಕ ಸೂರಿ ಅವರಿಗೆ ಪುನೀತ್ ರಾಜ್‍ಕುಮಾರ್ ಅವರ ನೆಚ್ಚಿನ ನಟರಾಗಿದ್ದು , ಅವರ ಜೊತೆ ಕೆಲಸ ಮಾಡುವುದು ತನಗೆ ಇಷ್ಟವೆಂದು, ಪುನೀತ್ ಅವರು ಪಾತ್ರಕ್ಕೆ ತಕ್ಕಂತೆ ನಟಿಸಿ , ನಿರ್ದೇಶಕನ ಕನಸನ್ನು ನನಸು ಮಾಡುತ್ತಾರೆಂದು ಹೇಳಿದ್ದಾರೆ. ಅಲ್ಲದೆ ಟಗರು ೨ ರ ಬಗ್ಗೆ ಮಾತನಾಡುವ ಸಮಯದಲ್ಲೇ ಪುನೀತ್ ಅವರೊಂದಿಗೆ ಹೊಸ ಸಿನಿಮಾದ ಬಗ್ಗೆ ಚರ್ಚಸಿದ್ದರಂತೆ.

ಜ್ವಾಲಾಮುಖಿ 

ಸಂತೋಷ್ ಆನಂದ್ ರಾಮ್ ನಿರ್ದೇಶನದ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರದ ಟೈಟಲ್ ಲಾಂಚ್ ನವೆಂಬರ್ ಒಂದನೇ ತಾರೀಖು ಅಫಿಷಿಯಲ್ ಆಗಿ ಅನೌನ್ಸ್ ಆಗಲಿದ್ದು ನವೆಂಬ ಒಂದರಂದು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಂದಲೇ ಈ ಹೊಸ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಇನ್ನು ಇಂಡಸ್ಟ್ರಿ ಹಿಟ್ ಹಾಗಿದ್ದ ರಾಜಕುಮಾರ ಚಿತ್ರದ ನಂತರ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದರಾಮ್ ಮತ್ತು ಹೊಬಾಳೆ ಕಂಬೈನ್ಸ್ ಮತ್ತೊಮ್ಮೆ ಈ ಚಿತ್ರಕ್ಕಾಗಿ ಜೊತೆಯಾಗುತ್ತಿದೆ.

ಇನ್ನು ಪುನೀತ್ ರಾಜ್‍ಕುಮಾರ್ ಅವರ ಅಭಿನಯದ 29 ನೇ ಚಿತ್ರಕ್ಕೆ ಜ್ವಾಲಾಮುಖಿ ಎಂಬ ಹೆಸರನ್ನು ಇಡಲಾಗಿದೆ ಎಂದು ಕೇಳಿಬಂದಿದ್ದು, ಇದು ಡಾ.ರಾಜ್‍ಕುಮಾರ್ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರದ ಹೆಸರಾಗಿದೆ. ಈ ಹಿಂದೆ ದೇವತಾ ಮನುಷ್ಯ ಹಾಗೂ ಪರಶುರಾಮ್ ಎಂಬ ಹೆಸರು ಕೂಡಾ ಕೇಳಿ ಬಂದಿತ್ತಾದರೂ, ಈಗ ಜ್ವಾಲಾಮುಖಿ ಎಂದು ಇಡಲಾಗಿದೆ ಎನ್ನಲಾಗಿದೆ. ಈ ಹೊಸ ಚಿತ್ರವು ಪುನೀತ್ ರಾಜ್‍ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿದ್ದು, ಚಿತ್ರದ ಟೈಟಲ್ ಏನೆಂಬುದು ನವಂಬರ್ ಒಂದರಂದು ಸ್ಪಷ್ಟವಾಗಿ ಎಲ್ಲರಿಗೂ ತಿಳಿಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here