ನಿರ್ದೇಶಕ ಪ್ರಶಾಂತ್ ನೀಲ್ ಎಂದರೆ ಈಗ ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಸಿರುವ ನಿರ್ದೇಶಕ. ಅವರ ಸಿನಿಮಾಗಳಲ್ಲಿ ನಟಿಸುವ ಆಸೆ ಕೂಡಾ ಈಗ ಸ್ಟಾರ್ ನಟರ ಆಸಕ್ತಿ ಎಂಬುದು ಕೂಡಾ ಸತ್ಯವಾದ ಸಂಗತಿ. ಇನ್ನು ಇದೇ ನಿರ್ದೇಶಕರ ಬಗ್ಗೆ ಒಂದು ಅಚ್ಚರಿಯ ಸುದ್ದಿಯನ್ನು ನೀಡಿದ್ದಾರೆ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಈ ಅಚ್ಚರಿಯ ವಿಷಯ ಏನೆಂದರೆ ಅದು ಪುನೀತ್ ರಾಜ್‍ಕುಮಾರ್ ಅವರು ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ ಅಂತ ಊಹೆ ಮಾಡಬೇಡಿ. ಏಕೆಂದರೆ ಪುನೀತ್ ರಾಜ್‍ಕುಮಾರ್ ಅವರು ಹೇಳಿದ್ದು ಈ ಹಿಂದೆಯೇ ತಾನು ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡಬೇಕಿತ್ತು ಎಂದು.

ಈ ವಿಷಯ ನಿಜ. ಪುನೀತ್ ರಾಜ್‍ಕುಮಾರ್ ಅವರು ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಮಾತನಾಡುತ್ತಾ ತಾನು ಈ ಹಿಂದೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ನಿಂತುಹೋಯಿತು ಎಂದು ಅವರು ಹೇಳಿದ್ದಾರೆ. ಈ ಸಿನಿಮಾ ಬಗ್ಗೆ ಬಹಳ ಹಿಂದೆಯೇ ಮಾತುಕತೆ ನಡೆದಿತ್ತು ಎಂದು ಹೇಳಿರುವ ಪುನೀತ್ ರಾಜ್‍ಕುಮಾರ್ ಅವರು, ತಮ್ಮಿಬ್ಬರ ಕಾಂಬಿನೇಷನ್ ನ ಸಿನಿಮಾ ಮಾತ್ರ ಅಲ್ಲದೇ ಸಿನಿಮಾಕ್ಕೆ  ಹೆಸರನ್ನು ಕೂಡಾ ಇಡಲಾಗಿತ್ತು ಎಂದು ಕೂಡಾ ಹೇಳಿದ್ದಾರೆ.

ಪುನೀತ್ ರಾಜ್‍ಕುಮಾರ್ ಹಾಗೂ ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ಸಿನಿಮಾ ನ ಆ ಸಿನಿಮಾಕ್ಕೆ “ಆಹ್ವಾನ” ಎಂದು ಟೈಟಲ್ ಇಡಲಾಗಿತ್ತಂತೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಆರಂಭದಲ್ಲೇ ನಿಂತು ಹೋಯಿತು ಎನ್ನುತ್ತಾ, ಸಿನಿಮಾ‌ ಸೆಟ್ಟೇರಲಿಲ್ಲ ಎಂದು ತಿಳಿಸಿದ್ದಾರೆ.ಅಷ್ಟೆ ಅಲ್ಲದೆ ಮುಂದಿನ ದಿನಗಳಲ್ಲಿ ನನಗೆ ಸರಿ ಹೊಂದುವ ಸ್ಕ್ರಿಪ್ಟ್ ಸಿದ್ಧವಾದರೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುವುದಾಗಿ ಪುನೀತ್ ಹೇಳಿದ್ದಾರೆ.  ಪ್ರಶಾಂತ್ ನೀಲ್ ಅವರು ಸದ್ಯ ಕೆಜಿಎಫ್ ಎರಡದಲ್ಲಿ ಬ್ಯುಸಿ ಇದ್ದರೆ, ಪುನೀತ್ ಅವರು ಜೇಮ್ಸ್ ಮತ್ತು ಯುವರತ್ನ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮುಂದೆ ಈ ಇಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿ ಎಂದು ಆಶಿಸೋಣ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here