ಚಿತ್ರರಂಗದಲ್ಲಿ ಸ್ಟಾರ್ ನಟರು ಎಂದ ಮೇಲೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಮಾನಿಗಳ ಬಳಗ ಇರುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಬಗ್ಗೆ ಮತ್ತೊಬ್ಬ ಕಲಾವಿದ ಮಾತನಾಡಿದಾಗ ಇನ್ನೊಬ್ಬ ಸ್ಟಾರ್ ನಟನ ಅಭಿಮಾನಿಗಳು ನಮ್ಮ ಸ್ಟಾರ್ ಬಗ್ಗೆ ಮಾತನಾಡಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಬಂದ ನಂತರ ಯಾವುದೇ ಒಬ್ಬ ಸ್ಟಾರ್ ಮತ್ತೊಬ್ಬ ಸ್ಟಾರ್ ಬಗ್ಗೆ ಪೋಸ್ಟ್ ಮಾಡಿದರೆ ತಮ್ಮ ಸ್ಟಾರ್ ನಟರ ಬಗ್ಗೆ ಪೋಸ್ಟ್ ಮಾಡಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವುದನ್ನು ನೋಡುವುದು ಸಾಮಾನ್ಯವಾಗಿದೆ.

ಇದೀಗ ಅಂತದ್ದೇ ಒಂದು ಘಟನೆ ಬಗ್ಗೆ ಹಿರಿಯ ನಟ ಅಶ್ವಥ್ ಅವರ ಪುತ್ರ ಕನ್ನಡ ಚಿತ್ರರಂಗದ ಪೋಷಕ ಕಲಾವಿದ ಶಂಕರ್ ಅಶ್ವಥ್ ಅವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟನ್ನು ಮಾಡಿದ್ದಾರೆ. ಆ ಪೋಸ್ಟ್ ಅನ್ನು ಉಲ್ಲೇಖಿಸುತ್ತಾ ಅದರಲ್ಲಿ ಡಾ. ರಾಜಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಗೆಗಿನ ತಮ್ಮ ಅನುಭವವನ್ನು ಹೇಳುತ್ತಾ ಕೊನೆಗೆ ಇದು ನನ್ನ ಅನುಭವದ ನುಡಿ ಇದರಲ್ಲಿ ನಾನು ಯಾರಿಗೂ…..(ಬಕೆಟ್) ಹಿಡಿಯುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಶಂಕರ್ ಅಶ್ವಥ್ ಬರೆದಿರುವ ಪೋಸ್ಟ್ ಈ ರೀತಿಯಾಗಿದೆ “ದಾನ ಧರ್ಮ ಮಾಡಬೇಕಾಗಿರುವುದು ಲೋಕ ಕಲ್ಯಾಣಕ್ಕಾಗಿ ಸ್ವಾರ್ಥಕ್ಕಲ್ಲಾ.ಅದಕ್ಕೆ ಅದನ್ನು ಗೌಪ್ಯವಾಗಿ ಇಡಬೇಕೆನ್ನುತ್ತಾರೆ.ಯಾಕೆಂದರೆ “ನಾನು” ಮಾಡಿದೆಯೆಂಬ ಅಹಂಕಾರ ಬರುತ್ತದೆ ಎಂದು.

ಅದರ ಜೊತೆಗೆ ಈ ಕಾಲದಲ್ಲಿ ಅಪಾತ್ರರು ಬೇಡುವವರು, ಕ್ಯೂನಲ್ಲಿ ನಿಲ್ಲುತ್ತಾರೆಂದು.ಇದೆಲ್ಲಾ ತಿಳಿದೇ ನಮ್ಮ ಹಿರಿಯರು ನೀತಿನಿಯಮಗಳನ್ನು ಮಾಡಿದಂತಹ ಜ್ಞಾನಿಗಳು.ಅದನ್ನರಿಯದೇ ಬೇರೆ ರೀತಿಯಲ್ಲಿ ಪ್ರಯೋಗಿಸಿದರೆ! ಅದರ ದುಷ್ಪರಿಣಾಮ ಖಚಿತ. ಇದನ್ನು ಅರಿತ ಜ್ಞಾನಿಗಳು ಸಾಕಷ್ಟು ಜನಿದ್ದಾರೆ.ಅದರಲ್ಲೊಬ್ಬರು ನಮ್ಮ ಅಣ್ಣಾವ್ರು. ಅವರು ತೆರೆಯ ಹಿಂದೆ ಎಷ್ಟೋ ಜನಗಳಿಗೆ ಸಂಸಾರಕ್ಕೆ ಸಂಸ್ಥೆಗೆ ಸಹಾಯ ಮಾಡಿದ್ದುಂಟು.ನಾನು ಒಬ್ಬ ಪೊಲೀಸ್ ಅಧಿಕಾರಿ ಸಮಾರಂಭದಲ್ಲಿ ಪೊಲೀಸ್ ನಿಧಿಗೆ ಅವರು ಸಂಭಾವನೆ ತೆಗೆದುಕೊಳ್ಳದೆ ರಸಮಂಜರಿ ಕಾರ್ಯಕ್ರಮಗಳನ್ನು ಮಾಡಿಕೊಟ್ಟಿದ್ದಾರೆಂದು ಹೇಳಿದ ಮಾತನ್ನು ನಾನೇ ಕಿವಿಯಾರೆ ಕೇಳಿದ್ದೇನೆ.
ಈಗ ತಂದೆಗೆ ತಕ್ಕ ಮಗನಾಗಿ ಹಾಗೆ ಅಪ್ಪು ಸಾರ್ ಮಾಡುತ್ತಿದ್ದಾರೆ. ಅದೇ ಗುಣ ಅದೇ ಆದರ್ಶ 🙏🙏
ಇದು ಸತ್ಯ ಸಂಗತಿ ನಾನು ಯಾರಿಗೂ…… ಹಿಡಿತ್ತಿಲ್ಲ.

ದಾನ ಧರ್ಮ ಮಾಡಬೇಕಾಗಿರುವುದು ಲೋಕ ಕಲ್ಯಾಣಕ್ಕಾಗಿ ಸ್ವಾರ್ಥಕ್ಕಲ್ಲಾ.ಅದಕ್ಕೆ ಅದನ್ನು ಗೌಪ್ಯವಾಗಿ ಇಡಬೇಕೆನ್ನುತ್ತಾರೆ.ಯಾಕೆಂದರೆ "ನಾನು"…

Shankar Aswath यांनी वर पोस्ट केले रविवार, १३ ऑक्टोबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here