ಒಂದೆಡೆ ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಎಲ್ಲಾ ಕಡೆ ರಜೆಯನ್ನು ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕರು ಮನೆಗಳಲ್ಲೇ ಉಳಿದಿದ್ದಾರೆ. ಆದರೆ ಅದು ವೈದ್ಯರಿಗೆ, ನರ್ಸ್ ಗಳಿಗೆ ಆಸ್ಪತ್ರೆ ಸಿಬ್ಬಂದಿಗೆ ನಿಜಕ್ಕೂ ಅನ್ವಯಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಾಗೂ ಸೋಂಕು ಪೀಡಿತರು ಎಂಬ ಶಂಕೆ ಬಂದವರನ್ನು ಪರೀಕ್ಷಿಸಿ ಅವರಿಗೆ ಚಿಕಿತ್ಸೆ ಒದಗಿಸಲು ನಿಂತಿರುವ, ಕಾರ್ಯ ಪ್ರವೃತ್ತರಾಗಿರುವ ವೈದ್ಯಕೀಯ ಸಿಬ್ಬಂದಿಯನ್ನು ಪ್ರತಿಯೊಬ್ಬರೂ ಕೂಡಾ ಸ್ಮರಿಸಿ, ಅವರ ಈ ಧೈರ್ಯ ಹಾಗೂ ಅವರ ಕರ್ತವ್ಯಕ್ಕೆ ಪ್ರತಿಯೊಬ್ಬರೂ ಕೂಡಾ ಧನ್ಯವಾದಗಳನ್ನು ಹೇಳುವ ಸಂದರ್ಭ ನಮ್ಮ ಮುಂದಿದೆ.

ಹೀಗೆ ಜನರ ಸೇವೆಗೆ ನಿಂತ ಧೈರ್ಯವಂತ ವೈದ್ಯರು, ವೈದ್ಯಕೀಯ ವೃತ್ತಿಪರರಿಗೆ ಒಂದು ಧನ್ಯವಾದ ತಿಳಿಸಿ ಅವರಿಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡುವ ಸಲುವಾಗಿ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಒಂದು ಹ್ಯಾಷ್ ಟ್ಯಾಗ್ ಚಾಲೆಂಜನ್ನು ಆರಂಭಿಸಿದ್ದಾರೆ. ಈ ವಿಷಯವನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಎಲ್ಲರೊಂದಿಗೆ ಹಂಚಿಕೊಂಡು ಒಂದು ಪೋಸ್ಟ್ ಹಾಕಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಆರಂಭಿಸಿರುವ ಈ ಹ್ಯಾಷ್ ಟ್ಯಾಗ್ ಸವಾಲಿನ ಉದ್ದೇಶ ಹಾಗೂ ಅದರ ಔಚಿತ್ಯವನ್ನು ಕೂಡಾ ಅವರೇ ವಿವರಿಸಿದ್ದಾರೆ.

ಪುನೀತ್ ಅವರು “ಈ ಹ್ಯಾಶ್‌ಟ್ಯಾಗ್ ಸವಾಲನ್ನು ಪ್ರಾರಂಭಿಸಿ – #ಬ್ರಾವೋಡಾಕ್ಟರ್ಸ್ ಪಿಎಲ್ ವೈದ್ಯಕೀಯ ವೃತ್ತಿಪರರಿಗೆ- ನಮ್ಮ ಕರೋನಾ ಯೋಧರಿಗೆ ನಿಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ. ನಮ್ಮ ವೈದ್ಯಕೀಯ ವೃತ್ತಿಪರರಿಗೆ ಅತ್ಯಂತ ಸವಾಲಿನ, ದುರ್ಬಲವಾದ ಪರಿಸ್ಥಿತಿಯಿದ್ದರೂ, ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಆರಂಭದ ಹಂತದಿಂದಲೇ ಹೋರಾಡುತ್ತಿದ್ದಾರೆ … ದಯವಿಟ್ಟು ಈ ಪೋಸ್ಟ್ ಅನ್ನು ಹಂಚಿಕೊಳ್ಳಿ ನಮ್ಮ ವೈದ್ಯರು, ದಾದಿಯರು ಮತ್ತು ಇತರ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸಲು ಮತ್ತು ಹುರಿದುಂಬಿಸಲು – ಈ ನಿರ್ಭೀತ, ಸಮರ್ಪಿತ ಆತ್ಮಗಳಿಗೆ ನಮ್ಮ ಕೃತಜ್ಞತೆಯನ್ನು ತೋರಿಸುವ ಸಮಯ ಇದು” ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here