ಸ್ಯಾಂಡಲ್ ವುಡ್ ‌ನ ಸ್ಟಾರ್ ನಟರು ಬೆಳ್ಳಿ ತೆರೆ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡಾ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅದಕ್ಕೆ ಉದಾಹರಣೆ ಕಿಚ್ಚ ಸುದೀಪ್, ರಮೇಶ್ ಅರವಿಂದ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕಿರುತೆರೆಯಲ್ಲಿ ದೊಡ್ಡ ಹೆಸರನ್ನೇ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿಯನ್ನು ಹೋಸ್ಟ್ ಮಾಡಿದ್ದರು. ಅನಂತರ ಅದರಿಂದ ಬಿಡುವು ಪಡೆದ ಅವರು ಇದೀಗ ಮತ್ತೆ ಕನ್ನಡದ ಕೋಟ್ಯಾಧಿಪತಿ ಮೂಲಕ ವರ್ಷಗಳ ನಂತರ ಕಿರುತೆರೆಗೆ ಕಂ ಬ್ಯಾಕ್ ಆಗುತ್ತಿದ್ದಾರೆ.

ಬೆಳ್ಳಿ ತೆರೆಯ ಮೇಲೆ ನಟನೆ ಮೂಲಕ ರಂಜಿಸುವ ಸ್ಟಾರ್ ನಟರು ಕಿರುತೆರೆಗೆ ಬಂದಾಗ ಉದ್ಭವಿಸುವ ಸಾಮಾನ್ಯ ಪ್ರಶ್ನೆ ಯಾವ ನಟರು ಕಾರ್ಯಕ್ರಮದ ನಿರೂಪಣೆಯನ್ನು ಚೆನ್ನಾಗಿ ಮಾಡುತ್ತಾರೆ ಎಂದು. ಇಂತಹುದೇ ಒಂದು ಪ್ರಶ್ನೆಯು ಪುನೀತ್ ರಾಜ್‍ಕುಮಾರ್ ಅವರಿಗೆ ಕೂಡಾ ಎದುರಾಗಿದೆ. ಈ ಪ್ರಶ್ನೆಗೆ ಉತ್ತರ ನೀಡಿದ ಪವರ್ ಸ್ಟಾರ್ ಎಲ್ಲರೂ ಚೆನ್ನಾಗಿ ನಿರೂಪಣೆ ಮಾಡುತ್ತಾರೆ. ರಮೇಶ್ ಅರವಿಂದ್ , ಸುದೀಪ್ ಅವರ ನಿರೂಪಣೆ ನೋಡಿದ್ದೇನೆ. ಅವರಿಬ್ಬರ ಕೆಲಸವೂ ಅದ್ಭುತವಾಗಿದೆ ಎನ್ನುತ್ತಾರೆ ಪುನೀತ್ ಅವರು.

ಅದರ ಜೊತೆಗೆ ಅಕುಲ್ ಬಾಲಾಜಿ , ಅನು ಶ್ರೀ, ಸೃಜನ್ ಲೋಕೇಶ್ ಅವರು ಕೂಡಾ ಒಳ್ಳೆ ಆ್ಯಂಕರಿಂಗ್ ಮಾಡುತ್ತಾರೆ ಎಂದಿದ್ದಾರೆ‌ ಪುನೀತ್ ಅವರು. ಈ ಮೊದಲು ಕನ್ನಡದ ಕೋಟ್ಯಾಧಿಪತಿಯ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ ಅವರು, ಅದಾದ ನಂತರ ಮೂರನೇ ಸೀಸನ್ ನಲ್ಲಿ ಬಿಡುವು ತೆಗೆದುಕೊಂಡಿದ್ದರು. ಅದಾದ ಮೇಲೆ ಒಂದು ಶೋ ನಡೆಸಿಕೊಟ್ಟಿದ್ದ ಅವರು , ಇದೀಗ ಕೋಟ್ಯಾಧಿಪತಿಯ ನಾಲ್ಕನೇ ಆವೃತ್ತಿಯ ಮೂಲಕ ಕಿರುತೆರೆಗೆ ರೀ ಎಂಟ್ರಿ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here