ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಈ ಹೆಸರು ಸ್ಯಾಂಡಲ್ ವುಡ್ ಮಂದಿಗೆ ಬಹಳಷ್ಟು ಚಿರಪರಿಚಿತ ಹೆಸರು. ಕನ್ನಡ ಚಿತ್ರರಂಗದಲ್ಲಿ ಅಪ್ಪು ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಪುನೀತ್ ರಾಜ್‍ಕುಮಾರ್ ಅಲ್ಲಿಂದ ಕನ್ನಡದ ಮೋಸ್ಟ್ ಪಾಪ್ಯುಲರ್ ಸೂಪರ್‌ಸ್ಟಾರ್ ಆಗಿ ಬೆಳೆದರು. ಕನ್ನಡಗರ ನೆಚ್ಚಿನ ನಟನಾಗಿ ಅಭಿಮಾನಿಗಳ ಒಅಲಿನ ಪ್ರೀತಿಯ ಪವರ್ ಸ್ಟಾರ್ ಆಗಿರುವ ಪುನೀತ್ ರಾಜ್‍ಕುಮಾರ್ ಅವರು ಕನ್ನಡಿಗರಿಗೆ ಅಪ್ಪು ಮೂಲಕ ಮನೆಮಾತಾಗಲಿಲ್ಲ , ಬದಲಿಗೆ ಮಾಸ್ಟರ್ ಲೋಹಿತ್ ಆಗಿದ್ದಾಗಲೇ ಪುನೀತ್ ರಾಜ್‍ಕುಮಾರ್ ಅವರು ಕನ್ನಡಿಗರ ಮನದಲ್ಲಿ ಸ್ಥಾನ ಪಡೆದಿದ್ದರು. ಬಾಲನಟನಾಗಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಪುನೀತ್ ರಾಜ್‍ಕುಮಾರ್ ಅವರಿಗೆ ಬಾಲ್ಯದಲ್ಲಿ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾ ಬೆಟ್ಟದ ಹೂವು.

ಬೆಟ್ಟದ ಹೂವು ಚಿತ್ರದ ಅದ್ಭುತ ಯಶಸ್ಸು ಮತ್ತು ಆ ಚಿತ್ರದ ಸನ್ನಿವೇಶಗಳು ಈಗಲೂ ಪುನೀತ್ ರಾಜ್‍ಕುಮಾರ್ ಅವರಿಗೆ ಮರೆಯಲಾಗದ ಅನುಭವ.ಸದ್ಯ ನಟಸಾರ್ವಭೌಮ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಪುನೀತ್ ರಾಜ್‍ಕುಮಾರ್ ಅವರು ನಟಸಾರ್ವಭೌಮ ಚಿತ್ರೀಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತ ಬೀಡುಬಿಟ್ಟಿದ್ದಾರೆ. ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಪುನೀತ್ ರಾಜ್‍ಕುಮಾರ್ ಅವರು 34 ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಬೆಟ್ಟದ ಹೂವು ಚಿತ್ರೀಕರಣ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಟ್ಟದ ಹೂವು ಚಿತ್ರೀಕರಣ ನಡೆದಿದ್ದ ಸ್ಥಳಗಳಿಗೆ ಪುನೀತ್ ರಾಜ್‍ಕುಮಾರ್ ಭೇಟಿ‌ ನೀಡಿ ಅಲ್ಲಿದ್ದ ಜನರ ಜೊತೆ ಬೆಟ್ಟದ ಹೂವು ಚಿತ್ರೀಕರಣ ನಡೆದಿದ್ದ ಅನುಭವ ಹಂಚಿಕೊಂಡಿದ್ದಾರೆ‌.

ಅಷ್ಟೇ ಅಲ್ಲ ಪುನೀತ್ ರಾಜ್‍ಕುಮಾರ್ ಅವರು ಅಲ್ಲಿಗೆ ಸಡನ್ ಆಗಿ‌ ಭೇಟಿ ನೀಡಿರುವುದು ಆ ಭಾಗದ ಜನರಿಗೆ ಬಹುದೊಡ್ಡ ಶಾಕ್ ಆಗಿದೆ. ಅವರೆಲ್ಲಾ ಅಪ್ಪು ವನ್ನು ಕಂಡು ಅಪ್ಪಿಕೊಂಡು ಮುದ್ದಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಚಿಕ್ಕಮಗಳೂರು ಜಿಲ್ಲೆಯ ಆ ಸ್ಥಳಗಳಿಗೆ ಭೇಟಿ ನೀಡಿದ ಕ್ಷಣಗ ಳನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದ ತಮ್ಮ ಅಫಿಷಿಯಲ್ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ‌. ಈ ವೀಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here