ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಳೆದ ಒಂದು ವಾರದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ,  ಸಂತೋಷ ಆನಂದರಾಮ ನಿರ್ದೇಶನದ ಬಹುನಿರೀಕ್ಷೆಯ ಯುವರತ್ನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಾಣಲು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಅಭಿಮಾನಿಗಳು ಕಳೆದ ಮೂರು ದಿನಗಳಿಂದ ಮುಗಿಬೀಳುತ್ತಿರುವ ಘಟನೆ ವರದಿಯಾಗಿದೆ. ನೆನ್ನೆ ಪುನೀತ್ ರಾಜಕುಮಾರ್ ಅವರನ್ನು ಕಾಣಲು ಬಿಟ್ಟಿಲ್ಲ ಎಂದು ಕೆಲ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದನ್ನು ಗಮನಿಸಿದ್ದೇವೆ. ಚಿತ್ರೀಕರಣದ ನಡುವೆಯೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಾಮುಂಡೇಶ್ವರಿ ದರ್ಶನ ಪಡೆಯಲು ಇಂದು

ಬೆಳ್ಳಂಬೆಳಗ್ಗೆ ಬರಿಗಾಲಿನಲ್ಲಿ ಚಾಮುಂಡಿಬೆಟ್ಟಕ್ಕೆ ಹತ್ತಿ  ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಪುನೀತ್ ರಾಜಕುಮಾರ್ ಅವರು ಚಾಮುಂಡಿ ದರ್ಶನ ಪಡೆಯಲು ಬಂದಿರುವ ಘಟನೆ ಭಕ್ತಾದಿಗಳಿಗೆ ಗೊತ್ತಾಗಿ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್  ಮಾಡಿದ್ದಾರೆ. ಇನ್ನು ಇದೆ ವೇಳೆ  ಪುನೀತ್ ರಾಜಕುಮಾರ್ ಅವರು ಮೈಸೂರಿನ ಅಭಿಮಾನಿಯೊಬ್ಬರ ಮನೆಯಲ್ಲಿ ದಿಢೀರ್ ಭೇಟಿ ನೀಡಿ ಅವರ ಮನೆಯಲ್ಲಿ ಕಾಫಿ ತಿಂಡಿ ಮಾಡಿದ್ದಾರೆ.

ಈ ದೃಶ್ಯಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಪುನೀತ್ ರಾಜಕುಮಾರ್ ಅವರು ಮೊದಲಿನಿಂದಲೂ ಹೇಳಿಕೇಳಿ ಸರಳತೆಗೆ ಹೆಸರು ಪಡೆದಿದ್ದು  ಅಭಿಮಾನಿ ಮನೆಗೆ ಭೇಟಿ ನೀಡಿ ಕಾಫಿ ಕುಡಿದಿರುವುದು  ಪುನೀತರಾಜಕುಮಾರ ರ  ಸರಳತೆಗೆ ಮತ್ತೊಂದು ಉದಾಹರಣೆಯಾಗಿದೆ.. ಮೈಸೂರಿಗೆ ಆಗಾಗ ಭೇಟಿ ನೀಡುವ ಪುನೀತ್ ರಾಜಕುಮಾರ್ ಅವರು ಚಾಮುಂಡಿಬೆಟ್ಟಕ್ಕೆ ತೆರಳುವಾಗ ಬರೀ ಕಾಲದಲ್ಲಿ ಬೆಟ್ಟ ಹತ್ತಿರುವುದು ಹಿಂದೆ ನಡೆದಿದ್ದು ಇಂದು ಸಹ ಪುನೀತ್ ರಾಜಕುಮಾರ್ ರವರ ಬರಿಗಾಲಿನಲ್ಲಿ ಚಾಮುಂಡಿ ದೇವಿಯ ದರ್ಶನ ಪಡೆದು ಪುಳಕಿತರಾದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here