ಕಳೆದ ಒಂದು ವಾರದಿಂದ ಕನ್ನಡದ ಬಹುನಿರೀಕ್ಷೆಯ ಯುವರತ್ನ ಚಿತ್ರದ ಚಿತ್ರೀಕರಣ ನಡೆಯುತ್ತಿದೆ . ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಟನೆಯ ಯುವರತ್ನ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣ ಇದ್ದು ಕನ್ನಡದ ಸುಪ್ರಸಿದ್ಧ ನಟರಾಗಿದ್ದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಸಹ ಯುವರತ್ನ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಒಂದು ವಾರದಿಂದ ಮೈಸೂರಿನಲ್ಲಿ ನಡೆಯುತ್ತಿದ್ದ ಯುವರತ್ನ ಚಿತ್ರೀಕರಣ ಮುಕ್ತಾಯವಾಗಿದ್ದು ಚಿತ್ರೀಕರಣ ಮುಗಿಸಿದ ನಂತರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಶಂಕರ್ ಅಶ್ವಥ್ ಅವರ ಮನೆಗೆ ಭೇಟಿ ನೀಡಿ

ಹಲವಾರು ನಿಮಿಷಗಳ ಕಾಲ ಉಭಯ ಕುಶಲೋಪರಿ ನಡೆಸಿದರು ‌. ಈ ಸಮಯದಲ್ಲಿ ಶಂಕರ್ ಅಶ್ವಥ್ ಅವರು ಪುನೀತ್ ರಾಜ್‍ಕುಮಾರ್ ಜೊತೆಗಿನ ಹಾಗೂ ತಮ್ಮ ಕುಟುಂಬದ ಒಡನಾಟವನ್ನು ಹಂಚಿಕೊಂಡಿದ್ದಾರೆ. “ಇದು ನಾ ಕಂಡ ಸತ್ಯ-
ತಂದೆ ಮಹಾರಾಜ ಮಗ ರಾಜಕುಮಾರ, ಡಾ.ರಾಜ್ ರಲ್ಲಿ ಇದ್ದ ಅತಿ ದೊಡ್ಡ ಶಕ್ತಿ ಎಂದರೆ ವಿನಯ ತಾಳ್ಮೆ ಸಹನೆ ಸೈರಣೆ ವಿಶಾಲತೆ ಬಹುಶಃ ಅದು ಅವರ ಹುಟ್ಟಿನಿಂದಲೇ ಬಂದಿರಬಹುದು ಎಂದು ನಾನು ಹೇಳುತ್ತಿರುವುದಲ್ಲಾ ಇದು ನನ್ನ ತಂದೆ ನನಗೆ ಹೇಳಿದ್ದು.

ಒಬ್ಬ ಮಹಾರಾಜನಿಗೆ ಇರಬೇಕಾದ ಗುಣಗಳು. ಅದೇ ಅಂಶ ಅವರ ವಂಶದ ಕುಡಿಯಲ್ಲೂ ಕಾಣಬಹುದು.ನನ್ನ ತಂದೆ ಅಪ್ಪುಸಾರ್ ಜೊತೆಯಲ್ಲಿ ಮೊದಲನೆಯ ಬಾರಿಗೆ ನಟಿಸುವ ಸಂದರ್ಭದಲ್ಲಿ” ಈ ಮಗುವಿಗೆ ಅಣ್ಣಾಅವರ ಎಲ್ಲಾ ಅಂಶಗಳು ಇದೆ ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ”ಎಂದು ಹೇಳಿದ್ದರು ಅದು ಇಂದು ಅಪ್ಪು ಸಾರ್ ನಿರೂಪಿಸಿದರು. ಮೇಲಿರುವ ಆ ಎರಡು ಜೀವಗಳು ಇದನ್ನು ನೋಡಿ ಎಷ್ಟು ಸಂತಷ್ಟರಾಗಿರಬಹುದು” ಎಂದು ಶಂಕರ್ ಅಶ್ವಥ್ ಅವರು ಪುನೀತ್ ಭೇಟಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಿಂದೆ ನನ್ನ ತಂದೆ ಇದ್ದಾಗ ಡಾ.ರಾಜ್ ಬರುತ್ತಿದ್ದರು ಈಗ -ಮನವು ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರಹೊಸ ಬೆಳಕಿಂದು ಹೊಸಲಿಗೆ ಬಂದು,ಬೆಳಗಿತು ಮನಗಳ ಮನೆಯಲ್ಲಿ ಇಂದು

Shankar Aswath यांनी वर पोस्ट केले शुक्रवार, १४ जून, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here