ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಹಳ ಮುಂಚೂಣಿಯಲ್ಲಿರುವ ನಟ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ರಾಜ್ಯವಲ್ಲದೇ ದೇಶಾದ್ಯಂತ ಅಪಾರ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರಗಳು,  ಚಿತ್ರದ ಹಾಡುಗಳು,  ಟೀಸರ್ಗಳು ರಿಲೀಸ್ ಆಗುತ್ತದೆ ಎಂದರೆ ಅಭಿಮಾನಿಗಳ ದೊಡ್ಡ ಮಟ್ಟದಲ್ಲಿರುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಯುವರತ್ನ ಚಿತ್ರವು  ತೆರೆಗೆ ಬರಲು ಸಜ್ಜಾಗುತ್ತಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ, ಹೊಂಬಾಳೆ ಬ್ಯಾನರ್ ನಿರ್ಮಿಸಿರುವ ಯುವರತ್ನ ಚಿತ್ರದ ಮೇಲೆ ಕನ್ನಡ ಸಿನಿ ಪ್ರಿಯರಿಗೆ ಬಹುದೊಡ್ಡ ನಿರೀಕ್ಷೆಯಿದೆ. ಮಾರ್ಚ್ ತಿಂಗಳು ಬಂತೆಂದರೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ. ಪುನೀತ್ ರಾಜಕುಮಾರ್ ಜನ್ಮದಿನಕ್ಕೆ ಯುವರತ್ನ ಚಿತ್ರತಂಡದಿಂದ ಈ ಬಾರಿ ಭರ್ಜರಿ ಗಿಫ್ಟ್ ಅಭಿಮಾನಿಗಳಿಗೆ ದೊರೆಯುತ್ತಿದೆ. ಹೌದು ಬಹುನಿರೀಕ್ಷಿತ ಯುವರತ್ನ ಚಿತ್ರದ ಡೈಲಾಗ್ ಟೀಸರನ್ನು ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ಯುವರತ್ನ ಚಿತ್ರತಂಡ ರಿಲೀಸ್ ಮಾಡಲಿದೆ.

ಪುನೀತ್ ರಾಜಕುಮಾರ್ ಜನ್ಮದಿನ ಮಾರ್ಚ್ 17ರಂದು ಇರುವುದರಿಂದ ಯುವರತ್ನ ಚಿತ್ರತಂಡ ಮಾರ್ಚ್ 16ನೇ ತಾರೀಕು ಯುವರತ್ನ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ಯುವರತ್ನ ಚಿತ್ರಕ್ಕಾಗಿ ಕಾದು ಕುಳಿತಿರುವ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಯುವರತ್ನ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗುವ ಆಗುವ ಸುದ್ದಿ ಬಹಳಷ್ಟು ಖುಷಿ ನೀಡಿದೆ. ಒಟ್ಟಿನಲ್ಲಿ ಈ ಬಾರಿ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಪುನೀತ್ ಜನ್ಮದಿನವು  ಡಬಲ್ ಧಮಾಕ ಆಗಿರುವುದರಲ್ಲಿ ಸಂಶಯವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here