ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರವೂ ಸಹ ಪ್ರಮುಖವಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಯುವರತ್ನ ಚಿತ್ರವು ಅಭಿಮಾನಿಗಳ ಮುಂದೆ ಬರಬಹುದಿತ್ತು. ಆದರೆ ದೇಶದಾದ್ಯಂತ ಕಳೆದ ನಾಲ್ಕು ತಿಂಗಳಿಂದ ಎಲ್ಲರ ತಲೆ ಕೆಡಿಸಿರುವ  ಕೊರೊನಾ ಯಾವುದೇ ಚಿತ್ರ ತೆರೆಗೆ ಬರಲು ಬಿಟ್ಟಿಲ್ಲ. ಆದರೆ ಯುವರತ್ನ  ಚಿತ್ರಕ್ಕಾಗಿ ಕಾದುಕುಳಿತಿರುವ ಅಭಿಮಾನಿಗಳಿಗೆ ಯುವರತ್ನ ಚಿತ್ರತಂಡದಿಂದ ಒಂದು ಸಂತಸದ ಸುದ್ದಿ ಹೊರಬಿದ್ದಿದೆ.

ಯುವರತ್ನ ಚಿತ್ರದ ಟೀಸರ್ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳಿಗೆ ಇದೀಗ ಯುವರತ್ನ ಚಿತ್ರದ ಹೊಸ ಪೋಸ್ಟರ್ ಅನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬಂದಿದೆ. ಇದೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶುಕ್ರವಾರ ಯುವರತ್ನ ಚಿತ್ರದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲು ಯುವರತ್ನ ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ  ಯುವರತ್ನ ಚಿತ್ರದ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಅಧಿಕೃತವಾಗಿ ತಿಳಿಸಿದ್ದಾರೆ. ಯುವರತ್ನ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಇನ್ನು

ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಚಿತ್ರೀಕರಣಕ್ಕೆ ಅವಕಾಶ ದೊರೆಯುತ್ತಿದ್ದಂತೆ ಭಾರತದಲ್ಲಿನ ಚಿತ್ರದ ಎರಡು ಹಾಡುಗಳನ್ನು ಚಿತ್ರೀಕರಣ ನಡೆಸುವುದಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ. ಈ ಮೊದಲು ಹೊರದೇಶದಲ್ಲಿ ಯುವರತ್ನ ಚಿತ್ರದ ಇನ್ನುಳಿದಿರುವ ಎರಡು ಹಾಡುಗಳ ಚಿತ್ರೀಕರಣ ಮಾಡಬೇಕು ಎಂದು ನಿರ್ಧರಿಸಿತ್ತು .ಆದರೆ ಪ್ರಪಂಚದಾದ್ಯಂತ ಹಬ್ಬಿರುವ ಕೊರೊನಾದಿಂದ ಯುವರತ್ನ ಚಿತ್ರದ ಎರಡು ಹಾಡುಗಳನ್ನು ಭಾರತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here