ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಯುವರತ್ನ ಸಿನಿಮಾದ ವಿಶೇಷ ಮಾಸ್ ಪೋಸ್ಟರ್ ಒಂದನ್ನು ಯುವರತ್ನ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಚಿತ್ರದ ಪೋಸ್ಟರ್ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಪೋಸ್ಟರ್ನಲ್ಲಿ ಪುನೀತ್ ರಾಜಕುಮಾರ್ ಅವರ ಮಾಸ್ ಲುಕ್ ಮತ್ತು ಪೋಸ್ಟರ್ ಮೇಲಿರುವ ಯುವರತ್ನ ಚಿತ್ರದ ಖಡಕ್ ಪವರ್ ಫುಲ್ ಡೈಲಾಗ್.

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಯುವರತ್ನ ಚಿತ್ರಕ್ಕಾಗಿ ಅಭಿಮಾನಿಗಳು ಕಳೆದ ಒಂದುವರೆ ವರ್ಷದಿಂದ ಕಾದುಕುಳಿತಿದ್ದಾರೆ. ಅಭಿಮಾನಿಗಳ ಕಾಯುವಿಕೆಗೆ ಕೊಂಚಮಟ್ಟಿಗೆ ಇಂದು ಯುವರತ್ನ ಚಿತ್ರತಂಡ ಖುಷಿಕೊಟ್ಟಿದೆ. “ನಾವ್ ಯಾವತ್ತು ಬೇರೆಯವರ ರೂಟ್ ಲಿ ಟ್ರಾವೆಲ್ ಆಗಲ್ಲ.! ನಮ್ದೇ ದಾರಿ ನಮ್ದೇ ಸವಾರಿ.! ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸ್ಕೊಳಲ್ಲ” ಎಂಬ ಪವರ್ ಫುಲ್ ಮಾಸ್ ಡೈಲಾಗ್ ಹೊಂದಿರುವ ಯುವರತ್ನ ಚಿತ್ರದ ಪೋಸ್ಟರ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here