ಬಹಳ ದಿನಗಳ ನಂತರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಮಕ್ಕಳಿಗೆ ಬೇಸಿಗೆ ರಜೆ ಇತ್ತೆಂದು ಪುನೀತ್ ಅವರು ಹಾಗೂ ಅವರ ಪತ್ನಿ ಅಶ್ವಿನಿ ಅವರು ದಕ್ಷಿಣ ಅಮೆರಿಕಾಕ್ಕೆ ಪ್ರವಾಸಕ್ಕಾಗಿ ತೆರಳಿದ್ದಾರೆ. ದಕ್ಷಿಣ ಅಮೆರಿಕದ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನೆಲ್ಲಾ ಸುತ್ತಿ ಸಖತ್ ಎಂಜಾಯ್ ಮಾಡಿದೆ ಪುನೀತ್ ಅವರ ಕುಟುಂಬ. ಪೆರು,ಚಿಲಿ ಸೇರಿದಂತೆ ಅನೇಕ ತಾಣಗಳಿಗೆ ಅವರು ಭೇಟಿ ನೀಡಿದ್ದು ಅಲ್ಲೆಲ್ಲಾ ಸುತ್ತಾಡಿ ಅಲ್ಲಿನ ಪ್ರವಾಸವನ್ನು ಬಹಳಷ್ಟು ಜಾಲಿಯಾಗಿ ಕಳೆದಿದ್ದಾರೆ. ಸದಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಿದ್ದ ಪುನೀತ್ ಅವರು ಪ್ರವಾಸದ ಮೂಲಕ‌ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಪ್ರವಾಸದಲ್ಲಿ ಅವರು ಸಾಹಸ ಆಟವಾದ ಸ್ಕೈ ಡೈವಿಂಗ್ ಮಾಡಿ, ತಮ್ಮ ಅಭಿಮಾನಿಗಳಿಗೆ ಎಕ್ಸೈಟಿಂಗ್ ಅನುಭವವನ್ನು ನೀಡಿದೆ. ಸ್ಕೈ ಡೈವಿಂಗ್ ನಲ್ಲಿ ಅವರು ಕೆಲ ಹೊತ್ತು ಆಗಸದಲ್ಲಿ ಹಾರಾಟ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದರ ಜೊತೆಗೆ ವಾಟರ್ ಫಾಲ್ಸ್ ವೀಕ್ಷಣೆ, ಬೋಟಿಂಗ್ ಹೀಗೆ ಮನರಂಜನಾ ಆಟಗಳಲ್ಲಿ ತೊಡಗಿಕೊಂಡು ಬಹಳಷ್ಟು ಸಂತೋಷದಿಂದ ಕುಟುಂಬದೊಂದಿಗೆ ಪ್ರವಾಸದ ಖುಷಿಯನ್ನು ಎಂಜಾಯ್ ಮಾಡಿದ್ದಾರೆ. ಯುವರತ್ನ ಸಿನಿಮಾದ ಚಿತ್ರೀಕರಣ ಬೆಳವಣಿಗೆಯಲ್ಲಿದ್ದು ಅದರ ಮಧ್ಯೆ ಕೊಂಚ ಬಿಡುವು ಮಾಡಿಕೊಂಡು ಅವರಯ ದಕ್ಷಿಣ ಅಮೆರಿಕದ ಪ್ರವಾಸ ಮುಗಿಸಿ ಬಂದಿದ್ದಾರೆ.

ಪುನೀತ್ ಅವರು ಭೇಟಿ ನೀಡಿದ ಪ್ರದೇಶಗಳ ವಿಡಿಯೋ ಮಾಡಿಕೊಂಡು ಬಂದಿದ್ದಾರೆ. ದಕ್ಷಿಣ ಅಮೆರಿಕಾದಲ್ಲಿ ಸುತ್ತಾಡಿದ ಎಲ್ಲಾ ಸ್ಥಳಗಳ ವಿಡಿಯೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿದೆ. ಈ ಬಾರಿ ಬೇಸಿಗೆಯಲ್ಲಿ ಪುನೀತ್ ಅವರು ದಕ್ಷಿಣ ಅಮೆರಿಕದ ಪ್ರವಾಸದಿಂದ ಕೊಂಚಮಟ್ಟಿಗೆ ರಿಲಾಕ್ಸ್ ಆಗಿರಬಹುದು. ಈ ಪವರ್ ಫುಲ್ ವೀಡಿಯೋ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here