ನಟ ಪುನೀತ್ ರಾಜ್‍ಕುಮಾರ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಕನ್ನಡದ ಪವರ್ ಸ್ಟಾರ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು ಪುನೀತ್ ರಾಜ್‍ಕುಮಾರ್ ನೋಡಲು ಹಲವಾರು ಅಭಿಮಾನಿಗಳು ಯಾವಾಗಲೂ ಕಾದು ಕುಳಿತಿರುತ್ತಾರೆ. ದೂರ ದೂರದ ಊರುಗಳಿಂದ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಹುಡುಕಿಕೊಂಡು ಪ್ರತಿದಿನ ಅವರ ನಿವಾಸದತ್ತ ಅಥವಾ ಚಿತ್ರೀಕರಣ ನಡೆಯುವ ಸ್ಥಳದತ್ತ ಹುಡುಕಿ ಬರುತ್ತಾರೆ , ಪುನೀತ್ ರಾಜ್‍ಕುಮಾರ್ ಜೊತೆ ಫೋಟೋ ತೆಗೆದುಕೊಂಡು ಸಂಭ್ರಮ ಪಡುತ್ತಾರೆ ಅದೇ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ತಮ್ಮ ಸಂತಸ ವ್ಯಕ್ತಪಡಿಸುತ್ತಾರೆ. ಹಾಗೆಯೇ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ಬಳಗ ಕೂಡ ಬಹಳ ದೊಡ್ಡದಾಗಿದೆ ಕೂಡ.

ಇಂತಹ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೋಡಲು ಅಭಿಮಾನಿಯೊಬ್ಬ ಬರೋಬ್ಬರಿ ಆರು ಕಿಲೋಮೀಟರ್ ಪುನೀತ್ ರಾಜ್‍ಕುಮಾರ್ ಅವರನ್ನು ಹಿಂಬಾಲಿಸಿದ್ದಾನೆ ಹೌದು ನಿನ್ನೆ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ ನಿಶ್ಚಿತಾರ್ಥ ಮೈಸೂರಿನಲ್ಲ ಜರುಗಿತ್ತು. ಅಣ್ಣನ ಮಗಮ ನಿಶ್ಚಿತಾರ್ಥಕ್ಕೆ ಪುನೀತ್ ರಾಜ್‍ಕುಮಾರ್ ಶುಭಾಶಯ ತಿಳಿಸಲು ಮೈಸೂರಿಗೆ ಅಸಗಮಿಸಿದ್ದರು ಕಾರ್ಯಕ್ರಮ ಮುಗಿಸಿ ಪುನೀತ್ ಹಿಂದಿರಿಗುವ ವೇಳೆ ನಟ ಪುನೀತ್ ರಾಜ್‍ಕುಮಾರ್ ಅವರ ಕಾರನ್ನು ಯಶ್ ಅಭಿಮಾನಿಯೊಬ್ಬ ಆರು ಕಿಲೋಮೀಟರ್ ಗಳ ದೂರ ಹಿಂಬಾಲಿಸಿದ್ದಾನೆ. ಮೈಸೂರಿನ ನಿವಾಸಿಯಾದ ಮೂಲತಃ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಜ್ ಕುಟುಂಬದ ಅಭಿಮಾನಿಯಾದ ಕೀರ್ತಿ ರಾಜಾಹುಲಿ ಎಂಬ ವ್ಯಕ್ತಿ ಪುನೀತ್ ರಾಜ್‍ಕುಮಾರ್ ಅವರ ಕಾರನ್ನು ಹಿಂಬಾಲಿಸಿದ್ದಾರೆ.

ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಕಾರು ಚಲಾವಣೆ ಮಾಡುತ್ತಿದ್ದರು. ಇದೇ ವೇಳೆ ಕೀರ್ತಿ ಎಂಬ ಯುವಕ ತಮ್ಮ ಕಾರನ್ನು ಹಿಂಬಾಲಿಸಿತ್ತಿರುವುದನ್ನು ಪುನೀತ್ ರಾಜ್‍ಕುಮಾರ್ ಮಿರರ್ ಮೂಲಕ ಗಮನಿಸಿದ್ದಾರೆ ಮೊದಮೊದಲು ಯಾರೋ ಇರಬೇಕು ಎಂದು ಅಪ್ಪು ಸುಮ್ಮನಾಗಿದ್ದರು ಆದರೆ ಆರು ಕಿಲೋಮೀಟರ್ ಹಿಂಬಾಲಿಸಿದ ಹುಡುಗನ ಗಮನಸಿಸಿದ ಪುನೀತ್ ತಮ್ಮ ಕಾರನ್ನು ಸೈಡಿಗೆ ಹಾಕಿದ್ದಾರೆ ಕೂಡಲೇ ಆತನನ್ನು ಕರೆದು ಮಾತನಾಡಿದ ಪುನೀತ್ ರಾಜ್‍ಕುಮಾರ್

ಯಾರು ನೀವು ರಸ್ತೆಯಲ್ಲಿ ಇಷ್ಟು ವೇಗವಾಗಿ ಕಾರನ್ನು ಹಿಂಬಾಲಿಸಬಾರದು ನನ್ನನ್ನು ನೀವು ಯಾವಾಗಲಾದರೂ ನೋಡಬಹುದು, ನಾನು ಮತ್ತೆ ಸಿಗುತ್ತೇನೆ ಆದರೆ ಪ್ರಾಣ ಯಾವಾಗಲೂ ಮತ್ತೆ ಸಿಗುವುದಿಲ್ಲ ಪ್ರಾಣ ಮುಖ್ಯ ನಿಮಗೇನು ಫೋಟೋ ಬೇಕಾ ತೆಗೆದುಕೊಳ್ಳಿ ಇನ್ನು ಮುಂದೆ ರಸ್ತೆಗಳಲ್ಲಿ ಈ ತರಹ ವೇಗವಾಗಿ ಚಲಿಸಬೇಡಿ ಟೇಕ್ ಕೇರ್ ಎಂದು ಹೇಳಿ ಆ ಹುಡುಗನ ಜೊತೆ ಫೋಟೋ ತೆಗೆಸಿಕೊಂಡು ಹೊರಟಿದ್ದಾರೆ.!

ಪುನೀತ್ ರಾಜ್‍ಕುಮಾರ್ ಅವರ ಈ ಅಮೂಲ್ಯ ಮಾತುಗಳನ್ನು ಕೇಳಿ ಫಿದಾ ಆಗಿರುವ ಆ ಹುಡುಗ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಅವರ ಸಿಂಪ್ಲಿಸಿಟಿ ಬಗ್ಗೆ ಹಾಗೂ ಅವರ ಕಾಳಜಿಯ ಬಗ್ಗೆ ಬರೆದಿದ್ದು ಸದ್ಯ ಪುನೀತ್ ಅಭಿಮಾನಿಗಳು ಪುನೀತ್ ಸರಳತೆಯ ಬಗ್ಗೆ ಕೊಂಡಾಡಿದ್ದಾರೆ. ಈ ಹಿಂದೆಯೂ ಕೂಡ ನಟ ದರ್ಶನ್ ಇದೇ ರೀತಿ ತಮ್ಮ ಅಭಿಮಾನಿಗೆ  ಬುದ್ದಿ ಹೇಳಿದ್ದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟರು ಸಮಾಜಮುಖಿ ಸಂದೇಶಗಳನ್ನು ನೀಡುತ್ತ ಮಾದರಿಯಾಗುತ್ತಿರುವುದು ನಿಜಕ ಉತ್ತಮ ಬೆಳವಣಿಗೆ ಎನ್ನಬಹುದು.! ಓದಿದ ನಂತರ ಶೇರ್ ಮಾಡಿ ಉತ್ತಮ ಸಂದೇಶಗಳುಳ್ಳ ಸುದ್ದಿಗಳು ಇನ್ನಷ್ಟು ಜನಕ್ಕೆ ತಲುಪಲಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here