ಅಭಿಮಾನ ಎಂಬುದು ಎಂತಹವರನ್ನೂ ಮಂತ್ರ ಮುಗ್ಧರನ್ನಾಗಿ ಮಾಡಿಬಿಡುತ್ತದೆ. ತಾನು ಆರಾಧಿಸುವ , ಅಭಿಮಾನಿಸುವ ನಟನ ಚಿತ್ರವನ್ನು ಕೈ ಮೇಲೆ , ಎದೆ ಮೇಲೆ ಟ್ಯಾಟು ಹಾಕಿಸ್ಕೊಳ್ಳೋದು ನೋಡಿರ್ತೀರ , ತನ್ನ ಮೆಚ್ಚಿನ ನಟನ ಹೆಸರಲ್ಲಿ ಪೂಜೆ ಪುರಸ್ಕಾರ ಮಾಡುವವರನ್ನು ನೋಡಿರ್ತೀರ. ಹಾಗೆ ತನ್ನ ಮೆಚ್ಚಿನ ನಟರ ಹೆಸರು ಹಾಕಿಸಿ ಮದುವೆ ಆಂಮತ್ರಣ ಪತ್ರಿಕೆ ಮಾಡಿಸುವವರನ್ನು ನೋಡಿರ್ತೀರ ಆದರೆ ಇಲ್ಲೊಬ್ಬ ಅಭಿಮಾನಿ ಇದೆಲ್ಲಕ್ಜಿಂತಲೂ ಮೀರಿ ಇನ್ನೊಂದು ಹೆಜ್ಜೆ ಇಟ್ಟಿದ್ದಾನೆ ಅವನು ಯಾರು , ಆತ ಯಾರ ಅಭಿಮಾನಿ ಅಂತೀರ , ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕಟ್ಟಾಭಿಮಾನಿಯಾದ ಬೆಂಗಳೂರಿನಲ್ಲಿ ನೆಲೆಸಿರುವ ನವೀನ್ ಎಂಬಾತ ತನ್ನ ಮದುವೆಗಾಗಿ ಪುನೀತ್ ರಾಜ್‍ಕುಮಾರ್ ಅವರ ಚಿತ್ರಗಳ ಹೆಸರು ಬಳಸಿ ವಿಶೇಷವಾಗಿ ಆಮಂತ್ರಣ ಪತ್ರಿಕ ವಿನ್ಯಾಸ ಮಾಡಿದ್ದು ಈ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ಸುದ್ದಿ ಮಾಡುತ್ತಿದೆ. ಅಲ್ಲದೆ ಈತನ ಅಭಿಮಾನಕ್ಕೆ ಪ್ರತಿಯೊಬ್ಬರು ವ್ಹಾವ್ ಎಂದು ಉದ್ಗಾರ ತೆಗೆದಿದಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈತ  ರಶ್ಮಿ ಎಂಬ ವಧುವನ್ನು ಮದುವೆಯಾಗುತ್ತಿದ್ದು ಈತನ ಮದುವೆಗೆ ಎಲ್ಲರೂ ಮನದುಂಬಿ ಹಾರೈಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here