©®suddimane  ಸೋನಿ ಟಿವಿಯ ಪ್ರತಿಷ್ಠಿತ ರಿಯಾಲಿಟಿ ಸಿಂಗಿಂಗ್ ಶೋ ಇಂಡಿಯನ್ ಐಡಲ್ ತನ್ನ ಹನ್ನೊಂದನೇ ಯಶಸ್ವಿ ಆವೃತ್ತಿಯನ್ನು ಮುಗಿಸಿದ್ದು, ಈ ಬಾರಿ ಪಂಜಾಬ್ ನ ಬಟಿಂಡಾದ ಪ್ರತಿಭಾವಂತ ಗಾಯಕ ಸನ್ನಿ ಹಿಂದೂಸ್ತಾನಿ ಟ್ರೋಫಿಯನ್ನು ತನ್ನದಾಗಿಸಿಕೊಂಡು ಸಂಭ್ರಮ ಪಟ್ಟಿದ್ದಾ‌ನೆ.‌ ಇಂಡಿಯನ್ ಐಡಲ್ ದೇಶದ ಮೂಲೆ ಮೂಲೆಗಳಿಂದ ಹುಡುಕಿ ತರುವ ಪ್ರತಿಭಾವಂತ ಗಾಯಕರಿಗೆ ವೇದಿಕೆಯನ್ನು ಒದಗಿಸಿ ಅವರ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡುತ್ತದೆ. ಹಾಗೇ ಹುಡುಕಿ ತಂದ ಪ್ರತಿಭಾವಂತ ಸನ್ನಿ ಹಿಂದೂಸ್ತಾನಿ. ಬೂಟ್ ಪಾಲಿಶ್ ಮಾಡಿ ಜೀವನ ನಡೆಸುವ ಯುವಕ ಈತ.

ಸನ್ನಿ ವೃತ್ತಿಪರ ಗಾಯಕನಲ್ಲ. ಅವರ ತಂದೆ ಮದುವೆ ಮನೆಗಳಲ್ಲಿ ಹಾಡಿ ಹಣ ಸಂಪಾದನೆ ಮಾಡುತ್ತಿದ್ದವರು. ಆದರೆ ದುರದೃಷ್ಟವಶಾತ್ ತಂದೆಯನ್ನು ಕಳೆದುಕೊಂಡ ಮೇಲೆ ಸನ್ನಿ ಬೂಟ್ ಪಾಲಿಶ್ ಮಾಡಬೇಕಾಯಿತು. ತಾಯಿ ಕೂಡಾ ಕಷ್ಟ ಪಡುತ್ತಿದ್ದರು ಆಕೆ ಬೀದಿ ಬೀದಿ ಸುತ್ತಿ ಬಲೂನು ಮಾರಾಟ ಮಾಡುತ್ತಿದ್ದರು. ಈಗ ಇಂಡಿಯನ್ ಐಡಲ್ ಗೆದ್ದಿರುವ ಸನ್ನಿ ಕುಟುಂಬದ ಆಸರೆಯಾಗಲಿದ್ದಾರೆ. ಟ್ರೋಫಿಯೊಂದಿಗೆ ಸನ್ನಿ ಅವರಿಗೆ 25 ಲಕ್ಷ ರೂ, ಒಂದು ಕಾರ್ ಹಾಗೂ ಟಿ ಸಿರೀಸ್ ಕಂಪನಿಯಲ್ಲಿ ಹಾಡುವ ಅವಕಾಶ ದಕ್ಕಿದೆ. ಸನ್ನಿ ಗೆ ಬಹುಮಾನ ಬಂದ ಕ್ಷಣದಲ್ಲಿ ಜಡ್ಜ್ ಗಳು ಕೂಡಾ ಭಾವುಕರಾದರು. ಸಾಧಿಸುವ ಛಲ ಸನ್ನಿಯನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ‌.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ನಟ ಅಜಯ್ ದೇವಗನ್, ನಟಿ ಕಾಜಲ್ ಆಯುಷ್ಮಾನ್ ಖುರಾನ ಕೂಡಾ ಸನ್ನಿಯ ಹಾಡಿಗೆ ಫಿದಾ ಆಗಿದ್ದಾರೆ. ಸನ್ನಿ ಹಿಂದೂಸ್ತಾನಿ ಅವರಿಗೆ ಇಡೀ ದೇಶವೇ ಪ್ರೀತಿಯ ಮಳೆಯನ್ನೇ ಹರಿಸಿದೆ‌. ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಸನ್ನಿ ಹಾಡಿದ ಹಾಡನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಮೆಚ್ಚುಗೆ ಸೂಚಿಸಿದ್ದರೆ, ನಟ ಗಜರಾಜ್ ಅವರು ಕೂಡಾ ತಮ್ಮ ಪೋಸ್ಟ್ ನಲ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.©®suddimane 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here