ಪುರಿ ಜಗನ್ನಾಥ ರಥಯಾತ್ರೆ ಅಥವಾ ರಥೋತ್ಸವ ಎಂದರೆ ಅದು ಜಗತ್ಪ್ರಸಿದ್ಧವಾದುದು. ಒಡಿಸ್ಸಾದ ಪುರಿಯಲ್ಲಿ ನಡೆಯುವ ಈ ಇತಿಹಾಸ ಪ್ರಸಿದ್ಧ ರಥ ಯಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಜನರು ಬರುವುದರಿಂದ , ರಥೋತ್ಸವದ ದಿನ ಲಕ್ಷಾಂತರ ಜನರು ಆ ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನೆರೆದಿರುತ್ತಾರೆ. ಮೂರು ದಿವ್ಯ ರಥಗಳ ರಥೋತ್ಸವನ್ನು ನೋಡುವುದೇ ಸೌಭಾಗ್ಯ. ಇನ್ನು ಪುರಿ ಜಗನ್ನಾಥ ಆಲಯದ ವಿಸ್ಮಯಗಳು ಕೂಡಾ ಈಗಾಗಲೇ ಭಕ್ತ ಕೋಟಿಗೆ ಶ್ರಿ ಮಹಾವಿಷ್ಣು ಪುರಿಯಲ್ಲೇ ನೆಲೆ ನಿಂತಿದ್ದಾನೆ ಎನ್ನುವಂತೆ ಮಾಡಿದೆ. ಇಂತಹ ಪುರಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನಡೆದ ರಥೋತ್ಸವದಲ್ಲಿ ಒಂದು ವಿಶೇಷ ಘಟನೆ ನಡೆದಿದೆ.

ರಥೋತ್ಸವವಾದ್ದರಿಂದ ಜುಲೈ 4 ರಂದು ಸಾಗರ ತೀರದ ಪುರಿಯಲ್ಲಿ, ಜಗನ್ನಾಥನನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆದಿದ್ದರು. ಜಗನ್ನಾಥ, ಬಲಭದ್ರ ಹಾಗೂ ಸುಭದ್ರ ದೇವಿಯ ರಥಗಳು ಬಡಾ ದಂಡ ರಸ್ತೆಯಿಂದ ಶ್ರೀ ಗಂಡೀಚ ದೇವಾಲಯದ ಕಡೆ ಹೊರಡುವ ರಸ್ತೆಯಲ್ಲಿ ರಥೋತ್ಸವ ನೋಡಲು ಜನರ ದಂಡೇ ಸೇರಿತ್ತು. ಅಂತಹ ಸಂದರ್ಭದಲ್ಲಿ ಜನರನ್ನು ನಿಯಂತ್ರಣ ಮಾಡುವುದು ಕಷ್ಟವೇ ಸರಿ‌. ಆದರೆ ಈಗ ಒಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಜನರು ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿರುವುದು ಕಾಣುತ್ತಿದೆ.

ಎಸ್.ಪಿ. ಪುರಿ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, ಜನ ದಟ್ಟಣೆ ಯಲ್ಲಿ ಆ್ಯಂಬುಲೆನ್ಸ್ ಒಂದಕ್ಕೆ ಸರಾಗವಾಗಿ ಚಲಿಸು ಹೋಗಲು ಮಾನವ ಸರಪಣಿಯನ್ನು ನಿರ್ಮಾಣ ಮಾಡಲಾಗಿದೆ. ಅದಕ್ಕಾಗಿ 1200 ಸ್ವಯಂಸೇವಕರು ಹಾಗೂ 10 ಸಂಸ್ಥೆಗಳು ಸೇರಿ, ರಸ್ತೆಯಲ್ಲಿ ಜನರನ್ನು ರಸ್ತೆಯ ಎರಡು ಬದಿಗಳಲ್ಲಿ ನಿಲ್ಲಿಸಿ, ಮಾನವ ಸರಪಣಿಯ ನಿರ್ಮಾಣ ಮಾಡಿದ ಸ್ವಯಂಸೇವಕರು ಆ್ಯಂಬುಲೆನ್ಸ್ ಗೆ ಮುಂದೆ ಸಾಗಲು ವ್ಯವಸ್ಥೆ ಮಾಡಿಕೊಟ್ಟಿರುವ ವಿಡಿಯೋ ಎಲ್ಲರ ಗಮನವನ್ನು ಸೆಳೆದಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here