ಪುರಿ ಜಗನ್ನಾಥ ದೇವಾಲಯವು ಕಲಿಯುಗದ ಪುಣ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ.

ಈ ದೇವಾಲಯವು ಒರಿಸ್ಸಾ ರಾಜ್ಯದ ರಾಜಧಾನಿ ಭುವನೇಶ್ವರ ಹತ್ತಿರ ಇದೆ. ಈ ಕ್ಷೇತ್ರವನ್ನು ಪುರುಷೋತ್ತಮ ಕ್ಷೇತ್ರ, ಜಗನ್ನಾಥ ಧಾಮ, ಶಂಖ ಕ್ಷೇತ್ರ ,ಜಗನ್ನಾಥ ಪುರಿ ಎಂದು ಕರೆಯುತ್ತಾರೆ. ಈ ದೇವಾಲಯವು ಶಂಖಾಕಾರದಲ್ಲಿದೆ.
ದ್ವಾರಕೆಯಲ್ಲಿ ರೋಹಿಣಿಯು ಶ್ರೀಕೃಷ್ಣ ನ ಬಾಲಲೀಲೆಗಳನ್ನು ಹಾಡಿಕೊಂಡು ಬರುವಾಗ ಕೃಷ್ಣನ ರಾಣಿಯರು ಅದನ್ನು ಕೇಳಿ ಕೊಳ್ಳುತ್ತಿದ್ದರು. ಅರಮನೆಯ ಹೊರಗೆ ಕೃಷ್ಣ , ಬಲರಾಮ, ಶ್ರೀ ಕೃಷ್ಣನ ತಂಗಿ ಸುಭದ್ರ ಮೂವರು ಇದನ್ನು ತನ್ಮಯರಾಗಿ ಕೇಳುತ್ತಾ ಅದರಲ್ಲಿ ಪೂರ್ತಿ ತಲ್ಲೀನರಾಗಿದ್ದಾಗ ಆಕಸ್ಮಿಕವಾಗಿ ಅಲ್ಲಿಗೆ ಬಂದ ನಾರದರು ಇವರನ್ನು ಕಂಡು ತಾವು ಈಗ ಇರುವ ತಲ್ಲೀನತೆಯ ಭಂಗಿಯಲ್ಲಯೇ ಭಕ್ತ ಜನರಿಗೆ ದರ್ಶನ ನೀಡಬೇಕೆಂದು ಶ್ರೀ ಕೃಷ್ಣ ಪರಮಾತ್ಮನನ್ನು ಕೇಳಲಾಗಿ ನಾರದರ ಕೋರಿಕೆಯಂತೆ ಆ ಮೂವರೂ ಪುರಿ ಜಗನ್ನಾಥ ಕ್ಷೇತ್ರ ದಲ್ಲಿ ದರ್ಶನ ನೀಡುತ್ತಿದ್ದಾರೆ ಎಂಬುದು ಅಲ್ಲಿಯ ಐತಿಹ್ಯ.


ಈ ಮಂದಿರದಲ್ಲಿ ಅಫೂರ್ಣವಾದ ಮರದಿಂದ ನಿರ್ಮಿತವಾದ ಶ್ರೀ ಕೃಷ್ಣ ,ಬಲರಾಮ, ಸುಭದ್ರೆಯರ ವಿಗ್ರಹಗಳಿವೆ ಇಲ್ಲಿ ಶ್ರೀ ಕ್ರಷ್ಣನನ್ನು ಜಗನ್ನಾಥ , ದಾರುಬ್ರಹ್ಮ ಎಂದೂ ಕರೆಯುತ್ತಾರೆ.
ಇಲ್ಲಿರುವ ಈ ಮೂರು ವಿಗ್ರಹಗಳಿಗೆ ಕೈ-ಕಾಲುಗಳಿಲ್ಲ ಕೇವಲ ಕಣ್ಣು ,ಮೂಗು, ಬಾಯಿ ಗಳು ಮಾತ್ರ ಇದ್ದು ಇದರ ಕುರಿತು ಒಂದು ಕಥೆಯೂ ಇದೆ.
ಮಾಳವ ದೇಶದ ದೊರೆ ಇಂದ್ರದ್ಯುಮ್ನ ಪುರಿಕ್ಷೇತ್ರದಲ್ಲಿರುವ ನೀಲಮಾಧವನನ್ನು ಪೂಜಿಸಬೇಕೆಂದು ಅಲ್ಲಿಗೆ ಬರುತ್ತಾನೆ. ಆದರೆ ದೇವತೆಗಳು ಆ ನೀಲಿ ಮಾಧವನ ವಿಗ್ರಹವನ್ನು ತಮ್ಮ ಲೋಕಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿರುತ್ತಾರೆ. ಇದನ್ನು ಕಂಡು ರಾಜನಿಗೆ ಬಹಳ ದುಃಖವಾಗುತ್ತದೆ.
ಆಗ ಆಶೀರವಾಣಿ ಯೊಂದು ಸಮುದ್ರದಲ್ಲಿ ತೇಲಿ ಬರುವ ದಿಮ್ಮಿಯಿಂದ ಅಲ್ಲಿಗೆ ಬರುವ ಬಡಗಿ ಯೊಬ್ಬನಿಂದ ಮೂರ್ತಿಯನ್ನು ಕೆತ್ತಸಬೇಕೆಂದು ನುಡಿಯುತ್ತದೆ. ಅದರಂತೆ ಸಮುದ್ರದಲ್ಲಿ ಮರದ ದಿಮ್ಮಿಯೊಂದು ತೇಲಿ ಬರುತ್ತದೆ. ದೇವಲೋಕದ ದೇವಶಿಲ್ಪಿ ವಿಶ್ವಕರ್ಮನು ಬಡಗಿಯಾಗಿ ಬರುತ್ತಾನೆ.

ತಾನು ಹೇಳುವವರಿಗೆ ಬಾಗಿಲು ತೆಗೆದು ನೋಡಬಾರದೆಂದು ಎಂಬ ಒಂದು ಷರತ್ತಿನೊಂದಿಗೆ ವಿಗ್ರಹವನ್ನು ಕೆತ್ತಲು ಶುರು ಮಾಡಿದನು.
ಒಂದು ಮನೆಯಲ್ಲಿ ಮರದ ದಿಮ್ಮಿಗಳನ್ನು ಇರಿಸಿ ತಾನೂ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ವಿಗ್ರಹವನ್ನು ಕೆತ್ತಲು ಶುರು ಮಾಡುತ್ತಾನೆ. ಎಷ್ಟೋ ದಿನಗಳು ಕಳೆದರೂ ಬಾಗಿಲು ತೆಗೆಯಲಿಲ್ಲ. ವಿಗ್ರಹವನ್ನು ಕೆತ್ತುವ ಶಬ್ದವೂ ಕೇಳಿಸಲಿಲ್ಲ.ಕುತೂಹಲ ತಡೆಯಲಾರದೆ ಕೊನೆಗೆ ರಾಜನು ಬಾಗಿಲು ತೆಗೆಯಿಸಿ ನೋಡೇ ಬಿಟ್ಟನು.

ಮರದ ಅಪೂರ್ಣ ಪ್ರತಿಮೆಗಳು ಅಲ್ಲಿ ಕಂಡು ಬಂದವು . ಆಗ ಮತ್ತೆ ಆಶೀರವಾಣಿಯೊಂದು ಮತ್ತೆ ಕೇಳಿ ಬಂತು. ಈ ಅಪೂರ್ಣವಾದ ವಿಗ್ರಹಗಳನ್ನೆ ಪ್ರತಿಷ್ಠಾಪಿಸಿ ಪೂಜಿಸಬೇಕೆಂದು. ಹೀಗಾಗಿ ಆ ಅಪೂರ್ಣ ವಿಗ್ರಹಗಳು ಅಂದಿನಿಂದ ಪೂಜಿಸಲ್ಪಟ್ಟಿದೆ.
ಇನ್ನೂ ಜನನ ಇದೆ
ಈ ಪುಣ್ಯಕ್ಷೇತ್ರ ದರ್ಶನ ಮಾಡುವವರು ಮೊದಲು ಸಮುದ್ರ ಸ್ನಾನ ಮಾಡಿದ ನಂತರ ಸಲ್ಲೇ ಇರುವ ಸಣ್ಣ ಜಗನ್ನಾಥ ದೇವರ ದರ್ಶನ ಮಾಡಿ ಮುಂದೆ ಇರುವ ಪುರಿ ಜಗನ್ನಾಥ ದೇವರ ದರ್ಶನವನ್ನು ಮಾಡಬೇಕು. ಈ ಸಮುದ್ರದ ಮಧ್ಯದಲ್ಲಿ ಜಲಭವನ ಎಂಬ ಭವನ ಇದ್ದು ಇಲ್ಲಿ
ಪ್ರತೀ ಅಕ್ಷಯ ತೆರಿಗೆಯಿಂದ ಇಪ್ಪತ್ತೋಂದು ದಿನಗಳವರೆಗೆ ಜಗನ್ನಾಥ ಮಂದಿರದ ಶ್ರೀ ಮದನಮೋಹನ ದೇವರ ಶೋಭಾ ಯಾತ್ರೆಯು ಬರುತ್ತದೆ. ಅಷ್ಟು ದಿನವೂ ಚಂದನ ಲೇಪಿಸಿ ಸ್ನಾನ ಮಾಡಿಸುತ್ತಾರೆ ಮದನಮೋಹನನಿಗೆ.
ಮಂದಿರದ ಪೂರ್ವ ದ್ವಾರದಲ್ಲಿ ಅರುಣ ಸ್ತಂಭ ಇದೆ.
ಬಂದ ಯಾತ್ರಾತ್ರಿಗಳು ಎಲ್ಲರೂ ಅದಕ್ಕೆ ಕೈಮುಗಿದು ಪ್ರದಕ್ಷಿಣೆ ಮಾಡುವರು. ಮಂದಿರದ ಪ್ರಾಂಗಣದ ದಲ್ಲಿ ಅನೇಕ ಮಧ್ಯಮ , ಸಣ್ಣಪುಟ್ಟ ತುಂಬಾ ದೇವಾಲಯಗಳಿವೆ.
ವಿಶ್ವನಾಥ, ಗಣೇಶ, ಬಾಲಮುಕುಂದ ನಾರಾಯಣ. ಸರ್ವಮಂಗಳ ಸಿದ್ದಗಣೇಶ, ನರಸಿಂಹ, ನೀಲಮಾಧವ, ಕಂಚಿಗಣೇಶ, ರಾಧಾ ಕೃಷ್ಣ, ನವಗ್ರಹ, ಸೂರ್ಯನಾರಾಯಣ ಇನ್ನೂ ಮುಂತಾದ ದೇವಾಲಯಗಳಿದ್ದು ವಟವೃಕ್ಷ ಒಂದುವಿದ್ದು ಅದನ್ನು ಕಲ್ಪವೃಕ್ಷ ಎನ್ನುತ್ತಾರೆ.
ಆ ದೇವಾಲಯದಲ್ಲಿ ಮುಕ್ತಿಮಂಟಪಕ್ಕೆ ಬ್ರಹ್ಮಾಸನ ಎಂದು ಕರೆಯುತ್ತಾರೆ.
ಗರ್ಭಗುಡಿಯಲ್ಲಿ ,16. ಅಡಿ ಉದ್ದ 4ಅಡಿ ಎತ್ತರದ ಗುಡಿಯಲ್ಲಿ ರಾಧಾಕೃಷ್ಣ ಬಲರಾಮ ಸುಭದ್ರಾ ವಿಗ್ರಹಗಳಿದ್ದು ವಿಗ್ರಹದ ಕಣ್ಣುಗಳು ಭಕ್ತರ ಗಮನ ಸೆಳೆಯುತ್ತದೆ.

ಇಲ್ಲಿ ನರಸಿಂಹ ದೇವರು ಕ್ಷೇತ್ರಪಾಲಕರಾಗಿದ್ದಾರೆ
ಈ ಜಗನ್ನಾಥ ರಥೋತ್ಸವ ಭಾರತದಲ್ಲೇ ಅತ್ಯಂತ ಜನಪ್ರಿಯ. ಪುರಿ ಜಗನ್ನಾಥ ದೇವಾಲಯ ದಿಂದ ಭುವನೇಶ್ವರಕ್ಕೆ ಹೋಗುವ ದಾರಿಯಲ್ಲಿ 16 ಕಿ.ಮಿ. ಸಾಗಿದರೆ ಸಾಕ್ಷಿ ಗೋಪಾಲ ಮಂದಿರ ಇದ್ದು ಇದೊಂದು ಪ್ರಾಚೀನ ಇತಿಹಾಸವುಳ್ಳ ದೇವಾಲಯ ವಾಗಿದ್ದು ಇದರ ದರ್ಶನ ಮಾಡಿದ ನಂತರ ನಿಮ್ಮ ಜಗನ್ನಾಥ ಯಾತ್ರೆ ಪೂರ್ಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here