ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ಕಿರುತೆರೆ ನಟ-ನಟಿಯರು ದಾಂಪತ್ಯ ಜೀನವಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಈ ಸಾಲಿಗೆ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಖ್ಯಾತಿಯ ಕಿರುತೆರೆ ನಟ ರಕ್ಷ್ ಸೇರಿದ್ದಾರೆ.ಹೌದು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ರಕ್ಷ್ ಅವರು ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಕಿರುತೆರೆಯ ಜನಪ್ರಿಯ ನಟ ರಕ್ಷ್ ಅವರು ಭಾನುವಾರ ಅನುಷಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ‌‌.

ರಕ್ಷ್ ಮದುವೆ ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ನಡೆದಿದೆ. ರಕ್ಷ್ ಕೈ ಹಿಡಿದ ಹುಡುಗಿಯ ಹೆಸರು ಅನುಷಾ ಆಗಿದ್ದು ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದಿಲ್ಲ. ಕೆಲವು ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು.ರಕ್ಷ್ ಅಭಿನಯಿಸಿದ್ದ ಮೊದಲ ಧಾರಾವಾಹಿ ಪುಟ್ಟಗೌರಿ ಮದುವೆ ಸಾಕಷ್ಟು ಜನಪ್ರಿಯತೆ ಪಡೆದು ಟಿ ಆರ್ ಪಿ ಗಳಿಸಿತ್ತು……

ಸದ್ಯ. ಕನ್ನಡದ ಜನಪ್ರಿಯ ಚಾನಲ್ ಜೀ ಕನ್ನಡ ವಾಹಿನಿಯ ಗಟ್ಟಿ ಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಈ ಧಾರವಾಹಿ ಸಹ ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ನೆನ್ನೆ ನಡೆದ ರಕ್ಷ್ ಮತ್ತು ಅನುಷಾ ಮದುವೆಗೆ ಕನ್ನಡ ಕಿರುತೆಯ ಜನಪ್ರಿಯ ಕಲಾವಿದರು ಸೇರಿ ಅನೇಕ ಗಣ್ಯರು ಆಗಮಿಸಿ ಶುಭಾಷಯ ತಿಳಿಸಿದರು .

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here