ಟಾಲಿವುಡ್ ನಟ,ಕಿಂಗ್ ನಾಗಾರ್ಜುನ ಮತ್ತು ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಟಿಬಿಎ) ಉಪಾಧ್ಯಕ್ಷ ಚಾಮುಂಡೇಶ್ವರಿನಾಥ್ ಅವರು ಜಂಟಿಯಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಾ, ದೇಶಕ್ಕೆ ಗೌರವ ತಂದು ಕೊಡುತ್ತಿರುವ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರ ಇತ್ತೀಚಿನ ಸಾಧನೆಗಳನ್ನು ಪುರಸ್ಕರಿಸುವ ಸಲುವಾಗಿ, ಒಂದು ಸ್ವಾಂಕಿ ಬಿಎಂಡಬ್ಲ್ಯೂ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಶನಿವಾರ, ನಟ ನಾಗಾರ್ಜು‌‌ನ ಪಿ.ವಿ ಸಿಂಧು ಅವರನ್ನು ಅನ್ನಪೂರ್ಣ ಸ್ಟುಡಿಯೋದಲ್ಲಿ ಭೇಟಿಯಾಗಿ ಕಾರನ್ನು ಆಕೆಯ ಕೋಚ್ ಪುಲ್ಲೇಲಾ ಗೋಪಿಚಂದ್ ಅವರ ಸಮ್ಮುಖದಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.

ಇದಕ್ಕೂ ಮೊದಲು ಪಿ.ವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗ, ಕ್ರಿಕೆಟ್ ದಂತಕಥೆ ಎಂದೇ ಕರೆಯಲ್ಪಡುವ, ಭಾರತದ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಕೂಡಾ ಅದೇ ಬ್ರಾಂಡ್‌ನ ಐಷಾರಾಮಿ ಕಾರನ್ನು ಪಿ.ವಿ.ಸಿಂಧು ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ನಂತರ, ಹಲವಾರು ಟಿಎಫ್‌ಐ ತಾರೆಗಳು ಅವರನ್ನು ಸಾಮಾಜಿಕ ಮಾದ್ಯಮಗಳ ಮೂಲಕ ಅಭಿನಂದಿಸಿದ್ದರು. ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಪಿ.ವಿ.ಸಿಂಧು ಅವರನ್ನು ಕರೆಸಿ ಸನ್ಮಾನಿಸಲಾಗಿದೆ.

ಪಿ.ವಿ ಸಿಂಧು ಅವರು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯರಾಗಿದ್ದು, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಜಪಾನ್‌ನ ನಜೌಮಿ ಒಕುಹರಾ ಅವರನ್ನು ಸೋಲಿಸುವ ಮೂಲಕ ಅವರು ಈ ಸಾಧನೆ ಮೆರೆದಿದ್ದಾರೆ. ತೆಲುಗು ರಾಜ್ಯಗಳ ಸಿಎಂಗಳು ಮತ್ತು ಪಿಎಂ ಮೋದಿ ಕೂಡ ಬ್ಯಾಡ್ಮಿಂಟನ್ ತಾರೆಯನ್ನು ವೈಯಕ್ತಿಕವಾಗಿ ಅಭಿನಂದಿಸಿದ್ದಾರೆ. ಇದು ಪಿ.ವಿ.ಸಿಂಧು ಅವರಿಗೆ ಉಡುಗೊರೆಯಾಗಿ ದೊರೆತ ನಾಲ್ಕನೇ ಕಾರಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here